ಹಾವೇರಿ, ಜೂ.21 (DaijiworldNews/HR): "ಪಿ.ಎಂ. ಕೇರ್ಸ್ ನಿಧಿಯ ಬಗ್ಗೆ ಜನತೆ ಕೇಳಿದರೆ ಮಾತ್ರ ನಾವು ಲೆಕ್ಕ ಕೊಡುತ್ತೇವೆ, ಕಾಂಗ್ರೆಸ್ನವರಿಗೆ ಏಕೆ ಲೆಕ್ಕ ಕೊಡಬೇಕು. ಅವರಿಗೆ ಲೆಕ್ಕ ಕೇಳುವ ಅಧಿಕಾರವೇನಿದೆ" ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ರಾಮದ್ರೋಹದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, " ಶ್ರೀರಾಮನ ದೇವಸ್ಥಾನ ಕಟ್ಟಬೇಕು ಅಂತ ನಿರ್ಧಾರ ಕೈಗೊಂಡವರೇ ಬಿಜೆಪಿಯವರು. ಪ್ರಣಾಳಿಕೆಯಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಜನರು ದೇಣಿಗೆ ನೀಡಿದ ಹಣವನ್ನು ದುರುಪಯೋಗ ಮಾಡಿಕೊಳ್ಳುವಂಥ ಅವಶ್ಯಕತೆ ಬಿಜೆಪಿಗಿಲ್ಲ" ಎಂದರು.
ಇನ್ನು "ಪಕ್ಷದಲ್ಲಿರುವ ಯಾವುದೇ ವ್ಯಕ್ತಿ ಅಶಿಸ್ತು ಪ್ರದರ್ಶನ ಮಾಡಿ, ಪಕ್ಷ ವಿರೋಧಿ ಹೇಳಿಕೆ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದು, ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.