ನವದೆಹಲಿ, ಜೂ.21 (DaijiworldNews/HR): ಗಂಡ ಮತ್ತು ಹೆಂಡತಿ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪತಿಯನ್ನು ಪತ್ನಿ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟವನ್ನು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಸಚಿನ್ ಕುಮಾರ್(39) ಎಂದು ಗುರುತಿಸಲಾಗಿದೆ.
ಈ ಘಟನೆ ನಡೆಯುವ ವೇಳೆ ದಂಪತಿಯ ಇಬ್ಬರು ಮಕ್ಕಳು ಕೂಡಾ ಮನೆಯಲ್ಲಿದ್ದು, ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಪತ್ನಿ ತಿಳಿಸಿರುವುದಾಗಿ ವರದಿ ಹೇಳಿದೆ.
ಇನ್ನು ಪತಿ ಮತ್ತು ಪತ್ನಿ ನಡುವೆ ಪ್ರತಿದಿನ ಮನೆಯಲ್ಲಿ ಜಗಳ ನಡೆಯುತ್ತಿದ್ದು, ಸಚಿನ್ ಕುಮಾರ್ ಕೊಲೆಯಾಗಲು ಇದೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಐಪಿಸಿ ಸೆಕ್ಷನ್ ಪ್ರಕಾರ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಕ್ರೈಂ ಬ್ರ್ಯಾಂಚ್ ಎಸ್ಪಿ ಪ್ರೀತ್ಪಾಲ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಸಚಿನ್ ಕುಮಾರ್ ಸಹೋದರ ತನ್ನ ಅತ್ತಿಗೆ ಗುಂಜನ್ ಕುಮಾರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.