ಕೊಚ್ಚಿ, ಜೂ 21 (DaijiworldNews/MS): ಅರಬ್ಬಿ ಸಮುದ್ರದ ಕೇರಳದ ಕರಾವಳಿ ಬಳಿ ಇದುವರೆಗೆ ಕಂಡುಬಾರದೆ ಇರುವ ಹುರಳಿಕಾಯಿ ಆಕಾರದ ದ್ವೀಪವೊಂದು ಇರುವುದು ಗೂಗಲ್ ಅರ್ತ್ನಲ್ಲಿ ಕಂಡು ಬಂದಿದ್ದು, ಇದರ ಸ್ಕ್ರೀನ್ಶಾಟ್ ಒಂದು ವೈರಲ್ ಆದ ಬೆನ್ನಲ್ಲೇ ಭಾರೀ ಚರ್ಚೆಗಳು ಆರಂಭಗೊಂಡಿದ್ದವು.
ಅಂದಾಜು ಪ್ರಕಾರ 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿರುವ ಗೂಗಲ್ ಅರ್ತ್ ಕಾಣಸಿಕ್ಕಿರುವ ದ್ವೀಪವೂ ಭೌತಿಕವಾಗಿ ಮಾತ್ರ ಕಾಣಸಿಕ್ಕಿಲ್ಲ. ಹೀಗಾಗಿ ಇದು ನೀರೊಳಗಿನ ರಚನೆ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿತ್ತು. ಇದು ಅನೇಕ ತಜ್ಞರ ಕುತೂಹಲ ಕೆರಳಿಸಿತ್ತು.
ಸದ್ಯ ಇದನ್ನು ತಜ್ಞರೊಬ್ಬರು " ಪ್ಲ್ಯಾಂಕ್ಟನ್, " ಎಂಬ ಜಲಚರ ಕ್ರಿಮಿಗಳ ಜೋಡಣೆಯಾಗಿರಬಹುದುಎಂದು ಅನುಮಾನಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಪ್ಲಾಂಕ್ಟನ್ಗಳು ಒಂದೆಡೆ ಸೇರಿರುವ ಸಾಧ್ಯತೆ ಇದ್ದು, ಇವುಗಳ ಈ ದೈತ್ಯ ರಚನೆಯನ್ನು ಉಪಗ್ರಹದ ಮೂಲಕ ಸೆರೆ ಹಿಡಿದಿರುವ ಸಾಧ್ಯತೆ ಇದೆ. ಇದು ಬಿಟ್ಟು ಅಲ್ಲೆಲ್ಲಾ ಮಣ್ಣು ಸೇರಿಕೊಂಡಿರುವ ಕುರಿತಂತೆ ನಾನು ಯಾವುದೇ ವರದಿಯೂ ಕಂಡುಬಂದಿಲ್ಲ., ಇಂತಹ ವಿದ್ಯಮಾನವು ಸಾಮಾನ್ಯವಾಗಿ ದೇವಾಲಯದ ಕೊಳ, ಕೆರೆಗಳಲ್ಲಿ ಒಳನಾಡಿನ ಪ್ರದೇಶಗಳಲ್ಲಿ ಕಂಡುಬರುತ್ತದೆ, ಆದರೆ ಸಮುದ್ರದ ಅಚನೆ ಬಗ್ಗೆ ಸೂಕ್ತ ಅಧ್ಯಯನ ಹಾಗೂ ಕುಫೋಸ್ ಹಾಗೂ ಕೊಚ್ಚಿಯ ವಿಜ್ಞಾನ ಹಾಗೂ ತಾಂತ್ರಿಕ ವಿವಿಗಳಂಥ ಏಜೆನ್ಸಿಗಳು ಮಾತ್ರವೇ ಇದೇನೆಂದು ತಿಳಿಸಬಲ್ಲವು" ಎಂದು ಕೇರಳ ಮೀನುಗಾರಿಕೆ ಹಾಗೂ ಸಾಗರಿಕ ಅಧ್ಯಯನ ವಿವಿಯ ಸಂಶೋಧನಾ ವಿಭಾಗದ ಮಾಜಿ ನಿರ್ದೇಶಕ ಕೆ.ವಿ. ಜಯಚಂದ್ರನ್ ತಿಳಿಸಿದ್ದಾರೆ.
ಏತನ್ಮಧ್ಯೆ, ಕೆಯುಎಫ್ ಓ ಎಸ್ ನ ನ ಉಪಕುಲಪತಿ ಕೆ. ರಿಜಿ ಜಾನ್ ಸರಿಯಾದ ತನಿಖೆಯ ಮೂಲಕ ಮಾತ್ರ ಹೊಸ ರಚನೆ ಏನೆಂದು ಕಂಡುಹಿಡಿಯಬಹುದು ಈ ಹಂತದಲ್ಲಿ ಈ ವಿದ್ಯಮಾನದ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯವನ್ನು ನೀಡುವುದು ಅಕಾಲಿಕವಾಗಿರುತ್ತದೆ. ಮೊದಲ ಹಂತವಾಗಿ, ನಾವು ಈಗ ಈ ಪ್ರದೇಶದಲ್ಲಿ ಕೆಲಸ ಮಾಡುವ ಏಜೆನ್ಸಿಗಳ ಸಭೆಯನ್ನು ಕರೆಯಲಿದ್ದೇವೆ. ಬಳಿಕ, ನಾವು ಅಧ್ಯಯನವನ್ನು ಮುಂದುವರಿಸಲು ರಾಜ್ಯ ಸರ್ಕಾರವನ್ನು ಸಂಪರ್ಕಿಸುತ್ತೇವೆ, ಎಂದು ”ಜಾನ್ ಹೇಳಿದರು.
"ಸೂಕ್ತ ಅಧ್ಯಯನ ಹಾಗೂ ಕುಫೋಸ್ ಹಾಗೂ ಕೊಚ್ಚಿಯ ವಿಜ್ಞಾನ ಹಾಗೂ ತಾಂತ್ರಿಕ ವಿವಿಗಳಂಥ ಏಜೆನ್ಸಿಗಳು ಮಾತ್ರವೇ ಇದೇನೆಂದು ತಿಳಿಸಬಲ್ಲವು" ಎಂದು ಜಯಚಂದ್ರನ್ ಹೇಳಿದ್ದಾರೆ.