ಶ್ರೀನಗರ, ಜೂ 21 (DaijiworldNews/PY): ಜಮ್ಮು-ಕಾಶ್ಮೀರದಲ್ಲಿ ಭರ್ಜರರಿ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ 3 ಪೊಲೀಸರು ಸೇರಿದಂತೆ, ಇಬ್ಬರು ಕೌನ್ಸಿಲರ್, 2 ನಾಗರೀಕರ ಹತ್ಯೆಗೆ ಕಾರಣರಾಗಿದ್ದ ಲಷ್ಕರ್ ಉಗ್ರ ಮುದಸಿರ್ ಹಾಗೂ 3 ಉಗ್ರರನ್ನು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಕಾಶ್ಮೀರದ ಸೋಪೋರ್ ಜಿಲ್ಲೆಯ ಗುಂಡ್ ಬ್ರಾತ್ ಪ್ರದೇಶದಲ್ಲಿ ಮ್ಯಾರಥಾನ್ ಎನ್ಕೌಂಟರ್ ನಡೆದಿದ್ದು, ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಮುದಸಿರ್ ಪಂಡಿತ್ ಹಾಗೂ ವಿದೇಶಿ ಉಗ್ರ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಹಾಗೂ 3 ಉಗ್ರರನ್ನು ಸದೆಬಡೆಯಲಾಗಿದೆ.
ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "3 ಪೊಲೀಸರು ಸೇರಿದಂತೆ, ಇಬ್ಬರು ಕೌನ್ಸಿಲರ್, 2 ನಾಗರೀಕರ ಹತ್ಯೆಗೆ ಕಾರಣರಾಗಿದ್ದ ಲಷ್ಕರ್ ಉಗ್ರ ಮುದಸಿರ್ ಹಾಗೂ 3 ಉಗ್ರರನ್ನು ಸದೆಬಡೆಯಲಾಗಿದೆ. ಇದರಲ್ಲಿ ಮುದಸಿರ್ ಪಂಡಿತ್ ಹಾಗೂ ವಿದೇಶಿ ಉಗ್ರ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಸೇರಿದ್ದಾರೆ" ಎಂದು ತಿಳಿಸಿದ್ದಾರೆ.
"2018ರವರೆಗೆ ಉಗ್ರ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಉತ್ತರ ಕಾಶ್ಮೀರದಲ್ಲಿ ಸಕ್ರಿಯವಾಗಿ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ" ಎಂದು ಹೇಳಿದ್ದಾರೆ.