ನವದೆಹಲಿ, ಜೂ 21 (DaijiworldNews/MS): ಕೋವಿಡ್-19 ಮಹಾಮಾರಿ ಸಾಂಕ್ರಾಮಿಕ ವಿರುದ್ಧ ಹೋರಾಟದಲ್ಲಿ ಯೋಗ ನಮ್ಮ ಜೀವನದಲ್ಲಿ ಭರವಸೆಯ ಆಶಾಕಿರಣವಾಗಿದೆ. ಯೋಗದಿಂದ ಜನರಿಗೆ ಅಂತರಿಕ ಶಕ್ತಿ ದೊರಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ ಮೋದಿ. " ಕೊರೊನಾ ಸಾಂಕ್ರಮಿಕ ರೋಗದಿಂದ ಪ್ರಪಂಚವೇ ನರಳುತ್ತಿದೆ. ಕಳೆದ ಎರಡು ವರ್ಷಗಳಿಂದ ಈಗ ಭಾರತದಲ್ಲಿ ಅಥವಾ ಇತರ ದೇಶಗಳಲ್ಲಿ ಕೊವೀಡ್ ನಿಂದ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೆ ಜನರಲ್ಲಿ ಯೋಗದ ಬಗ್ಗೆ ಇರುವ ಪ್ರೀತಿ, ಉತ್ಸಾಹ ಕಡಿಮೆಯಾಗಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಜಗತ್ತಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಾಗ ಅದನ್ನು ಎದುರಿಸಲು ಯಾವುದೇ ದೇಶ ಸಿದ್ಧವಾಗಿರಲಿಲ್ಲ. ಆದರೆ ಈ ವೈರಸ್ ವಿರುದ್ಧ ನಾವು ಹೋರಾಡಬಹುದು ಎಂದು ಅರಿತುಕೊಳ್ಳಲು ಯೋಗವು ನಮಗೆ ಸಹಾಯ ಮಾಡಿತು. ಯೋಗವು ಸ್ವಯಂ ಶಿಸ್ತಿಗೆ ಕಾರಣವಾಗಿದೆ.
ಯೋಗವು ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಸವಾಲಿನ ಕಾಲದಲ್ಲಿ ಒಬ್ಬರು ಹೇಗೆ ಬದುಕಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.