ನವದೆಹಲಿ, ಜೂ. 20 (DaijiworldNews/HR): ಯೋಗವು ಮನಸ್ಸಿಗೆ ಮತ್ತು ದೇಹಕ್ಕೆ ಉಪಯೋಗವಾಗಿದ್ದು, ಇದು ಒಂದು ನಿರ್ದಿಷ್ಟ ಧರ್ಮ ಅಥವಾ ಸಂಘಕ್ಕೆ ಸೇರಿಲ್ಲ, ಅದು ಮಾನವೀಯತೆಗೆ ಸೇರಿದೆ" ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಸಮಗ್ರ ಆರೋಗ್ಯ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಈ ಪ್ರವರ್ತಕ ಪ್ರಯತ್ನವನ್ನು ನಡೆಸುತ್ತಿರುವ ವಿಶ್ವಸಂಸ್ಥೆಯ ಮಾಹಿತಿ ಕೇಂದ್ರ ಮತ್ತು ಇತರ ಸಂಸ್ಥೆಗಳ ಈ ಸಹಯೋಗದ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ" ಎಂದರು.
ಇನ್ನು ಕೊರೊನಾ ತುರ್ತು ಪರಿಸ್ಥಿತಿಯನ್ನು ಅನುಸರಿಸಿ ಒಬ್ಬರ ಆಲೋಚನೆಗಳಲ್ಲಿ ಆರೋಗ್ಯವು ಅಗ್ರಗಣ್ಯವಾಗಿರುವುದರಿಂದ ಯೋಗ ದಿನವನ್ನು ಆಚರಿಸುವುದು ಸಮಯೋಚಿತವಾಗಿದೆ" ಎಂದಿದ್ದಾರೆ.
ವಿಶ್ವಸಂಸ್ಥೆಯು ಜೂನ್ 21 ಅನ್ನು ಯೋಗ ದಿನ ಎಂದು ಗುರುತಿಸುವುದರ ಹಿಂದಿನ ಪ್ರಮುಖ ಉದ್ದೇಶವೆಂದರೆ ಜಾಗತಿಕವಾಗಿ ಸಾರ್ವಜನಿಕ ಆರೋಗ್ಯದಲ್ಲಿ ಯೋಗದ ಸಾಮರ್ಥ್ಯವನ್ನು ಒತ್ತಿಹೇಳುವುದಾಗಿದೆ.