ನವದೆಹಲಿ, ಜೂ 20 (DaijiworldNews/PY): "ದೇಶದಲ್ಲಿ ಈವರೆಗೆ 29 ಕೋಟಿಗೂ ಹೆಚ್ಚು ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಉಚಿತವಾಗಿ ಪೂರೈಕೆ ಮಾಡಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
"ವ್ಯರ್ಥವಾಗಿರುವ ಲಸಿಕೆ ಸೇರಿದಂತೆ ದೇಶದಲ್ಲಿ ಒಟ್ಟು 26,04,19,412 ಡೋಸ್ ಲಸಿಕೆ ಹಾಕಲಾಗಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿರುವ ಒಟ್ಟು ಲಸಿಕೆಯಲ್ಲಿ ಇನ್ನೂ 3.06 ಕೋಟಿ ಲಸಿಕೆ ಬಾಕಿ ಇದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
"ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇಂದು ಬೆಳಗ್ಗಿನವರೆಗೆ ಒಟ್ಟು 3,06,34638 ಲಸಿಕೆ ದಾಸ್ತಾನು ಇದೆ" ಎಂದು ಕೇಂದ್ರ ಸಚಿವಾಲಯ ವಿವರಿಸಿದೆ.