National
ನಾಸ್ಡಾಕ್ ದುಬೈನ ಖಾಸಗಿ ಮಾರುಕಟ್ಟೆ ಪ್ರವೇಶಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್
- Sun, Jun 20 2021 02:31:39 PM
-
ಬೆಂಗಳೂರು, ಜೂ 20 (DaijiworldNews/PY): ಜಗತ್ತಿನ ಅತಿ ದೊಡ್ಡ ಜ್ಯುವೆಲ್ಲರಿ ರೀಟೇಲರ್ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ನ ಅಂತರಾಷ್ಟ್ರೀಯ ಹೂಡಿಕೆ ಅಂಗಸಂಸ್ಥೆಯಾಗಿರುವ ಮಲಬಾರ್ ಇನ್ವೆಸ್ಟ್ಮೆಂಟ್ಸ್ ದುಬೈ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್ಸಿ) ಅನ್ನು ಪ್ರವೇಶಿಸಿದೆ ಹಾಗೂ ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯೂರಿಟೀಸ್ ಡೆಪೋಸಿಟರ್ (ಸಿಎಸ್ಡಿ)ಯಲ್ಲಿ ತನ್ನ ಷೇರುಗಳನ್ನು ನೋಂದಣಿ ಮಾಡಿದೆ. ಇದರ ಮೂಲಕ ಮಲಬಾರ್ ಗ್ರೂಪ್ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಮುಖ ಬೆಳವಣಿಗೆಯೊಂದಿಗೆ ಹೂಡಿಕೆದಾರರು ಹಾಗೂ ಪೂರೈಕೆದಾರರೊಂದಿಗಿನ ಮಲಬಾರ್ ಸಂಪರ್ಕಗಳು ಮತ್ತಷ್ಟು ಬಲಗೊಳ್ಳುವಂತಾಗಿದೆ. ಕಂಪೆನಿಯು ತನ್ನ ಪಾರದರ್ಶಕತೆ, ನಿಯಮಬದ್ಧತೆ, ಸಮರ್ಥ ಆಗೂ ರಕ್ಷಣಾತ್ಮಕ ಪರಿಹಾರಗಳನ್ನು ತನ್ನ ಷೇರು ಸಂಬಂಧಿತ ಕಾರ್ಪೊರೇಟ್ ಪ್ರಕ್ರಿಯೆಗಳನ್ನು ನಡೆಸಲಿದೆ.
ಈ ಶುಭ ಸಂದೇಶವನ್ನು ಮಲಬಾರ್ ಗ್ರೂಪ್ನ ಅಧ್ಯಕ್ಷ ಎಂ.ಪಿ ಅಹ್ಮದ್ ಅವರು ನಾಸ್ಡಾಕ್ ದುಬೈನ ಮಾರುಕಟ್ಟೆ ಗಂಟೆಯನ್ನು ಬಾರಿಸುವ ಮೂಲಕ ಈ ಸಂಭ್ರಮದ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದುಬೈ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ನ ಗವರ್ನರ್ ಹಾಗೂ ದುಬೈ ಫೈನಾನ್ಶಿಯಲ್ ಮಾರ್ಕೆಟ್ನ ಅಧ್ಯಕ್ಷ ಡಾ. ಪಿ.ಎ ಇಬ್ರಾಹಿಂ ಹಾಜಿ, ಮಲಬಾರ್ ಗ್ರೂಪ್ನ ಸಹ ಅಧ್ಯಕ್ಷ ಹಮೀದ್ ಅಲಿ, ನಾಸ್ಡಾಕ್ ದುಬೈನ ಸಿಇಒ ಹಾಗೂ ಡಿಎಫ್ಎಂನ ಉಪ ಸಿಇಒ ಸೇರಿದಂತೆ ಎರಡೂ ಕಡೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ನಾಸ್ಡಾಕ್ ದುಬೈ ಪ್ರೈವೇಟ್ ಮಾರ್ಕೆಟ್ಗೆ ಗ್ರೂಪ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ ಇಎನ್ಬಿಡಿ ಸೆಕ್ಯುರಿಟೀಸ್ನಂತಹ ಬ್ರೀಕರೇಜ್ ಕಂಪೆನಿಗಳ ಮೂಲಕ ನಿರ್ದೇಶಕ ಮಂಡಳಿಯ ಅನುಮೋದನೆಯೊಂದಿಗೆ ಷೇರುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಅಂತರಾಷ್ಟ್ರೀಯ ಕಾರ್ಯಾಚರಣೆಗಳಿಂದ ತನ್ನ 300ಕ್ಕಿಂತ ಅಧಿಕ ಷೇರುದಾರರಿಗೆ ಅನುವು ಮಾಡಿಕೊಡುತ್ತದೆ. ಅದೇ ರೀತಿ ಮಾಲೀಕತ್ವದ ವರ್ಗಾವಣೆಗಳು ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯುರಿಟೀಸ್ ಡಿಪಾಸಿಟರಿಯಲ್ಲಿ ಸುರಕ್ಷಿತವಾಗಿ ನಡೆಯುತ್ತವೆ. ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯುರಿಟೀಸ್ ಡೆಪೋಸಿಟರಿ (ಸಿಎಸ್ಡಿ)ಯಲ್ಲಿ ಮಾಲೀಕತ್ವದ ವರ್ಗಾವಣೆ ಅತ್ಯಂತ ಸುರಕ್ಷಿತವಾಗಿ ನಡೆಯಲಿದೆ.
ಡಿಐಎಫ್ಸಿಯ ಗವರ್ನರ್ ಹಾಗೂ ಡಿಎಫ್ಎಂನ ಅಧ್ಯಕ್ಷ ಹೆಚ್.ಇ.ಎಸ್ಸಾ ಕಝೀಂ ಅವರು ಮಾತನಾಡಿ, "ಈ ಪ್ರದೇಶದ ಪ್ರಮುಖ ಕೇಂದ್ರ ಹಾಗೂ ಅಂತರಾಷ್ಟ್ರೀಯ ಹಣಕಾಸು ಕೇಂದ್ರವಾಗಿ ದುಬೈ ರೂಪುಗೊಂಡಿದೆ. ಬಂಡವಾಳ ಮಾರುಕಟ್ಟೆಗಳ ಲಾಭಗಳನ್ನು ಪಡೆಯುವ ನಿಟ್ಟಿನಲ್ಲಿ ಹಲವಾರು ಕಂಪೆನಿಗಳಿಗೆ ಹಲವಾರು ಅವಕಾಶಗಳನ್ನು ಒದಗಿಸಲು ದುಬೈ ಬದ್ಧವಾಗಿದೆ. ಅಲ್ಲದೇ, ಬಂಡವಾಳ ಮಾರುಕಟ್ಟೆಗಳ ಲಾಭಗಳನ್ನು ಪಡೆಯಲು ಹಾಗೂ ಅವರ ಬೆಳವಣಿಗೆಯ ಕಾರ್ಯತಂತ್ರಗಳನ್ನು ಸಶಕ್ತಗೊಳಿಸಲು ಹಲವಾರು ರೀತಿಯ ಕಂಪೆನಿಗಳನ್ನು ವಿವಿಧ ರೀತಿಯ ಕಂಪೆನಿಗಳಿಗೆ ಹಾಗೂ ಅವರ ಬೆಳವಣಿಗೆಯ ಕಾರ್ಯತಂತ್ರಗಳನ್ನು ಶಕ್ತಗೊಳಿಸಲು ಹಲವಾರು ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ. ಡಿಐಎಫ್ಸಿಯ ವಿಶ್ವಮಟ್ಟದ ವ್ಯಾಪಾರದ ವಾತಾವರಣ ಹಾಗೂ ನಾಸ್ಡಾಕ್ ಮೂಲಸೌಕರ್ಯ ಹಾಗೂ ನಿಬಂಧನೆಗಳನ್ನು ಹೊಸ ಕಂಪೆನಿಗಳನ್ನು ಸ್ಥಾಪಿಸುವುದು, ಅವರ ಪ್ರಸ್ತುತ ಚಟುವಟಿಕೆಗಳನ್ನು ಪುನರ್ರಚಿಸುವುದು ಅಥವಾ ಅವುಗಳ ಬಂಡವಾಳ ಮಾರುಕಟ್ಟೆಯನ್ನು ಕಾರ್ಯಗತಗೊಳಿಸುವುದು ಎಂಬುದರ ಕುರಿತು ವಿಶ್ವದಾದ್ಯಂತ ಹಲವಾರು ಪ್ರಮುಖ ಉದ್ಯಮಗಳನ್ನು ನಿರಂತರವಾಗಿ ಆಕರ್ಷಿಸುವಲ್ಲಿ ಇದು ಪ್ರಮುಖ ಅಂಶವಾಗಿದೆ" ಎಂದರು.
ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾ (ಎಂಇಎಎಸ್ಎ)ದಲ್ಲಿ ಡಿಐಎಫ್ಸಿ ಒಂದು ಪ್ರಮುಖ ಹಣಕಾಸು ಹಬ್ ಆಗಿದೆ. ಈ ಪ್ರದೇಶ 72 ದೇಶಗಳು ಸುಮಾರು 3 ಬಿಲಿಯನ್ ಜನಸಂಖ್ಯೆಯನ್ನು ಹೊಂದಿವೆ ಹಾಗೂ 7.7 ಟ್ರಿಲಿಯನ್ ಯುಎಸ್ ಡಾಲರ್ನಷ್ಟು ಜಿಡಿಪಿಯನ್ನು ಹೊಂದಿವೆ.
ಮಲಬಾರ್ನ ಈ ಪ್ರಮುಖ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲಬಾರ್ ಗ್ರೂಪ್ನ ಅಧ್ಯಕ್ಷ ಎಂ.ಪಿ ಅಹ್ಮದ್ ಅವರು, "ಅಂತರಾಷ್ಟ್ರೀಯ ಮಟ್ಟದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಪ್ರಗತಿ ಸಾಧಿಸುವುದನ್ನು ಮುಂದುವರಿಸಿದ್ದು, ಕಂಪೆನಿಯು ದುಬೈ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ನಂತಹ ಸಂಸ್ಥೆಯಲ್ಲಿ ನೆಲೆಗೊಂಡಿರುವುದು ಸಂತಸ ತಂದಿದೆ. ಅಂತರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ಪಾರದರ್ಶಕತೆ, ನಿಯಮಗಳ ಹಾಗೂ ಅನುಸರಣೆ ಆಧಾರಲ್ಲಿ ನೆಲೆಗೊಂಡಿದೆ. ಹೆಚ್ಚು ಔಪಚಾರಿಕ ಹಾಗೂ ಪಾರದರ್ಶಕ ಪ್ರಕ್ರಿಯೆಯ ಮೂಲಕ ಷೇರು ವರ್ಗಾವಣೆಯೊಂದಿಗೆ ಷೇರುಗಳ ರಿಜಿಸ್ಟ್ರಾರ್ ಆಗಿ ಸ್ವತಂತ್ರ ನಿಯಂತ್ರಿತ ಅಧಿಕಾರವನ್ನು ಹೊಂದಿರುವ ಅಗತ್ಯವನ್ನು ಮಂಡಳಿ ಗುರುತಿಸಿದೆ" ಎಂದರು.
ನಾಸ್ಡಾಕ್ ದುಬೈನ ಸಿಇಒ ಹಾಗೂ ಡಿಎಫ್ಎಂನ ಉಪ ಸಿಇಒ ಹಮೀದ್ ಅಲಿ ಅವರು ಮಾತನಾಡಿ, "ನಾಸ್ಡಾಕ್ ದುಬೈ ಪ್ರೈವೇಟ್ ಮಾರ್ಕೆಟ್ಗೆ ಸೇರ್ಪಡೆಗೊಂಡಿರುವುದಕ್ಕೆ ನಾವು ಮಲಬಾರ್ಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಇದು ಸಾರ್ವಜನಿಕ ಮಾರುಕಟ್ಟೆಗಳ ಮೂಲಕ ಅಥವಾ ಖಾಸಗಿಯಾಗಿರಲಿ, ಹೆಚ್ಚಿನ ಹೂಡಿಕೆದಾರರ ಪಾಲ್ಗೊಳ್ಳುವಿಕೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುವ ಸಾಮರ್ಥ್ಯವನ್ನು ವ್ಯವಹಾರಗಳಿಗೆ ಒದಗಿಸುತ್ತದೆ. ಹೊಸ ಹೂಡಿಕೆದಾರರು ಮಂಡಳಿಯನ್ನು ಬರುವಾಗ ಷೇರುದಾರರ ಸಂಖ್ಯೆ ಹೆಚ್ಚಾಗಲು ಪ್ರಾರಂಭವಾದಾಗ ಷೇರು ನೋಂದಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಈ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿದ್ದೇವೆ" ಎಂದು ತಿಳಿಸಿದರು.
ಮಲಬಾರ್ ಗ್ರೂಪ್ನ ಕಾರ್ಯಾಚರಣಾ ವ್ಯವಹಾರವಾದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಪ್ರಸ್ತುತ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ದೂರದ ಪೂರ್ವ ಹಾಗೂ ಯುಎಸ್ನಂತಹ 10 ದೇಶಗಳಲ್ಲಿ 260 ಕ್ಕೂ ಹೆಚ್ಚು ಮಳಿಗೆಗಳು ಹಾಗೂ 14 ಸಗಟು ಘಟಕಗಳನ್ನು ಹೊಂದಿದೆ. ಅಲ್ಲದೇ, 14 ಆಭರಣ ಉತ್ಪಾದನಾ ಕೇಂದ್ರಗಳನ್ನು ಹೊಂದುವ ಮೂಲಕ ವಿಸ್ತಾರವಾದ ವ್ಯಾಪಕ ಜಾಲದ ಮೂಲಕ 4.51 ಬಿಲಿಯನ್ ಡಾಲರ್ಗಳ ವಹಿವಾಟನ್ನು ನಡೆಸುತ್ತಿದೆ.
ಕಂಪೆನಿಯು 2021-22ನೇ ಸಾಲಿನಲ್ಲಿ ಭಾರತದಲ್ಲಿ 40 ಸೇರಿದಂತೆ ಜಗತ್ತಿನಾದ್ಯಂತ ಇನ್ನೂ 56 ಸ್ಟೋರ್ಗಳನ್ನು ಆರಂಭಿಸುವ ಯೋಜನೆ ಮೂಲಕ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ವಿಸ್ತರಣೆ ಯೋಜನೆಗೆ ಕಂಪೆನಿಯು 220 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಭವಿಷ್ಯದ ಮಾರುಕಟ್ಟೆಯಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲಿದೆ ಎಂಬ ವಿಶ್ವಾಸವನ್ನು ಹೊಂದಿದೆ.