ನವದೆಹಲಿ, ಜೂ 20 (DaijiworldNews/PY): ಪೆಟ್ರೋಲ್ ಹಾಗೂ ಡೀಸೆಲ್ ದರ ಭಾನುವಾರವೂ ಏರಿಕೆ ಮಾಡಲಾಗಿದ್ದು, ಒಂದು ಲೀಟರ್ ಪೆಟ್ರೋಲ್ 30 ಪೈಸೆ ಹಾಗೂ ಡೀಸೆಲ್ ಗೆ 27 ರಿಂದ 29 ಪೈಸೆಯಷ್ಟು ಹೆಚ್ಚಳವಾಗಿದೆ.
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ 103.36 ರೂ., ಡೀಸೆಲ್ 95.44 ರೂಪಾಯಿಗೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 97.22 ರೂ., ಡೀಸೆಲ್ ದರ 87.97 ರೂ. ಗೆ ಏರಿಕೆಯಾಗಿದೆ.
ರಾಜಸ್ಥಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 108.37 ರೂ. ಗೆ ಏರಿಕೆಯಾದರೆ. ಲೀಟರ್ ಡೀಸೆಲ್ 101.12 ರೂ. ಆಗಿದೆ. ಬೋಪಾಲ್ನಲ್ಲಿ ಪೆಟ್ರೋಲ್ ಲೀಟರ್ಗೆ 105.43ರೂ. ಹೆಚ್ಚಳವಾದರೆ, ಡೀಸೆಲ್ ಲೀಟರ್ಗೆ 96.65 ರೂ. ಹೆಚ್ಚಳವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.47 ರೂ. ಆದರೆ, ಡೀಸೆಲ್ ದರ 93.26 ರೂ. ಆಗಿದೆ. ಇದರೊಂದಿಗೆ ಮೈಸೂರು, ಹುಬ್ಬಳ್ಳಿಯಲ್ಲಿಯೂ ಪೆಟ್ರೋಲ್ ನೂರರ ಗಡಿ ದಾಟಿದೆ.