ನವದೆಹಲಿ, ಜೂ 20 (DaijiworldNews/PY): "ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬದ ಸದಸ್ಯರಿಗೆ 4 ಲಕ್ಷ ರೂ ಪರಿಹಾರ ಹಣ ಪಾವತಿಲಸಿ ಸಾಧ್ಯವಿಲ್ಲ" ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬದ ಸದಸ್ಯರಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಕೋರಿಸ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ.
"ಕೇಂದ್ರ ಈಗಾಗಲೇ ಆರ್ಥಿಕ ನೆರವು ನೀಡಿದೆ. ಅಲ್ಲದೆ, ಅಗತ್ಯವಿರುವ ವ್ಯಕ್ತಿಗಳಿಗೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರಗಳು ಕೂಡಾ ಪರಿಹಾರಗಳನ್ನು ನೀಡಿದೆ. ಈ ಹಿನ್ನೆಲೆ ಆರ್ಥಿಕ ಹೊರೆ ಸೃಷ್ಟಿಯಾಗಿದೆ" ಎಂದು ಕೇಂದ್ರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.
ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಾಲ್ ಕನ್ಸಾಲ್ ಅವರು ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 12ನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಅದರ ಪ್ರಕಾರ, "ರಾಷ್ಟ್ರೀಯ ಪ್ರಾಧಿಕಾರ, ವಿಪತ್ತು ಪೀಡಿತ ವ್ಯಕ್ತಿಗಳಿಗೆ ಒದಗಿಸಬೇಕಾದ ಕನಿಷ್ಠ ಗುಣಮಟ್ಟದ ಪರಿಹಾರದ ಮಾರ್ಗಸೂಚಿಗಳನ್ನು ಶಿಫಾರಸು ಮಾಡಬೇಕು. ಇದರಲ್ಲಿ ಪರಿಹಾರ ನೆರವು ಸೇರಿರುತ್ತದೆ" ಎಂದಿದ್ದಾರೆ.