ಹಾಸನ, ಜೂ. 20 (DaijiworldNews/HR): ಗಂಡನನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ಯುವತಿಯನ್ನು ಪೋಷಕರು ಎರಡನೇ ಮದುವೆ ಮಾಡಿದ್ದಕ್ಕೆ ಮನನೊಂದು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್ನಲ್ಲಿ ನಡೆದಿದೆ.
ಮೃತರನ್ನು ಪ್ರಜ್ವಲ (26), ಸಾಧ್ವಿ (2) ಎಂದು ಗುರುತಿಸಲಾಗಿದೆ.
ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ಎನ್ನುವವರು ಕೆಲ ಸಮಯದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪ್ರಜ್ವಲ ಈ ಆಘಾತದಿಂದ ಹೊರಬಂದಿರಲಿಲ್ಲ. ಆದರೆ ಪ್ರಜ್ವಲ ಪೋಷಕರು ಮಗಳ ಜೀವನ ಸರಿ ಹೋಗಲಿ ಎಂದು ಆನೆಮಹಲ್ ಗ್ರಾಮದ ವ್ಯಕ್ತಿಯೊಂದಿಗೆ ಜೂನ್ 16ರಂದು ಎರಡನೇ ಮದುವೆ ಮಾಡಿದ್ದರು.
ಇನ್ನು ಈ ಎರಡನೇ ಮದುವೆಯಿಂದ ಮನೊಂದ ಪ್ರಜ್ವಲ ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.