ಬೆಂಗಳೂರು, ಜೂ 20 (DaijiworldNews/PY): ಮಲೇಷ್ಯಾದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಮಾಜಿ ಸಚಿವ ಎಐಎಡಿಎಂಕೆ ಮುಖಂಡ ಎಂ. ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
"ಪ್ರಕರಣದಲ್ಲಿ ಮಣಿಕಂಠನ್ ಅವರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು ಅಂದಿನಿಂದ ಮಣಿಕಂಠನ್ ತಲೆಮರೆಸಿಕೊಂಡಿದ್ದರು" ಎಂದು ಪೊಲೀಸರು ಹೇಳಿದ್ದಾರೆ.
ಮಣಿಕಂಠನ್ ವಿರುದ್ದ ಅಡ್ಯಾರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಟಿ ಕಾಯ್ಡೆಯಡಿ ಪ್ರಕರಣ ದಾಖಲಾಗಿದೆ.
"ನಾನು ಕಳೆದ ಐದು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದೆ. ನನ್ನನ್ನು ವಿವಾಹವಾಗುವುದಾಗಿ ನಂಬಿಸಿ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಾನು ಮೂರು ಬಾರಿ ಗರ್ಭ ಧರಿಸಿದ್ದು, ಬಲವಂತವಾಗಿ ಗರ್ಭಪಾತ ಮಾಡಿಸಿದರು" ಎಂದು ಮಲೇಷ್ಯಾ ಮೂಲದ ಭಾರತೀಯ ಮಹಿಳೆ ದೂರಿದ್ದಾರೆ.