ಚಾಮರಾಜನಗರ, ಜೂ 20 (DaijiworldNews/PY): "ಜುಲೈ 1ರಿಂದ ತರಗತಿಗಳು ಪ್ರಾರಂಭವಾಗಲಿದ್ದು, ಆನ್ಲೈನ್ ಹಾಗೂ ದೂರದರ್ಶನದಿಂದಷ್ಟೇ ಪಾಠ ನಡೆಸಲಾಗುವುದು" ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜುಲೈ 1ರಿಂದ ತರಗತಿಗಳು ಆರಂಭವಾಗಲಿವೆ. ಆದರೆ, ನೇರ ತರಗತಿ ಆರಂಭವಿಲ್ಲ. ಆನ್ಲೈನ್ ಹಾಗೂ ದೂರದರ್ಶನದ ಮೂಲಕ ಪಾಠ ನಡೆಸಲಾಗುವುದು. ಸರ್ಕಾರದ ಮಾರ್ಗಸೂಚಿ ಪಡೆದ ಬಳಿ ಶಾಲೆ ಪ್ರಾರಂಭವಾಗಲಿದೆ" ಎಂದಿದ್ದಾರೆ.
"ಕೊರೊನಾ ಹಿನ್ನೆಲೆ ಸರ್ಕಾರಿ ಶಾಲೆಗಳಿಗೆ ಅಧಿಕ ಮಕ್ಕಳು ಸೇರುತ್ತಿದ್ದಾರೆ. ಕಳೆದ ವರ್ಷ ಒಂದೂವರೆ ಲಕ್ಷ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದು, ಈ ವರ್ಷವೂ ಹೆಚ್ಚು ಮಕ್ಕಳು ಸರ್ಕಾರ ಶಾಲೆಗೆ ಸೇರುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.