ನವದೆಹಲಿ, ಜೂ. 19 (DaijiworldNews/HR): ಬಿಜೆಪಿ ಪಕ್ಷವನ್ನು ತೊರೆದು ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್ ಅವರು ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
2014ರಲ್ಲಿ ಕಾಂಗ್ರೆಸ್ನನ್ನು ತೊರೆದು ಬಿಜೆಪಿ ಸೇರಿದ್ದ ದೇಶ್ ಮುಖ್, ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನ್ಮ ದಿನದಂದು ಮತ್ತೆ ಮಾತೃ ಪಕ್ಷಕ್ಕೆ ಮಹಾರಾಷ್ಟ್ರ ಕಾಂಗ್ರಸ್ ಮುಖ್ಯಸ್ಥ ನಾನಾ ಪಟೋಲೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎಚ್. ಕೆ ಪಾಟೀಲ್ ಮುಂದಾಳತ್ವದಲ್ಲಿ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಕುರಿತು ಕಾಂಗ್ರೆಸ್ ಪಕ್ಷದ ಸದಸ್ಯ ಆದಿತ್ಯ ಗೋಸ್ವಾಮಿ ಟ್ವೀಟ್ ಮಾಡಿದ್ದು, "ಡಾ. ಸುನೀಲ್ ದೇಶ್ ಮುಖ್ ಅವರೊಂದಿಗೆ, ತಿರೋರಾ ಕ್ಷೇತ್ರದ 18 ಬಿಜೆಪಿ ಕಾರ್ಪೋರೇಟರ್ಗಳು ಮತ್ತು ಮಾಜಿ ಎನ್ಸಿಪಿ ಶಾಸಕ ಎಸ್. ದಿಲೀಪ್ ಬನ್ಸೋಡ್ ಅವರು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ಗೆ ಸೇರಿದ್ದಾರೆ" ಎಂದು ತಿಳಿಸಿದ್ದಾರೆ.