ಪಣಜಿ, ಜೂ 19 (DaijiworldNews/PY): "ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡದೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ 10 ಮಂದಿ ಶಾಸಕರಿಗೆ ಪುನಃ ಕಾಂಗ್ರೆಸ್ಗೆ ಪ್ರವೇಶವಿಲ್ಲ" ಎಂದು ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಗೋವಾದ ಮಡಗಾಂವ ಹಾಗೂ ಪಣಜಿ ಸಮೀಪದ ಸಂತಾಕ್ರೂಜ್ನಲ್ಲಿ ಉಚಿತ ಸಸಿ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ಗೆ ಪಕ್ಷಕ್ಕೆ ರಾಜೀನಾಮೆ ನೀಡದೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ 10 ಮಂದಿ ಶಾಸಕರಿಗೆ ಪುನಃ ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶ ನೀಡಲಾಗುವುದಿಲ್ಲ" ಎಂದು ತಿಳಿಸಿದ್ದಾರೆ.
ಕೈ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಿರುವ 10 ಮಂದಿ ಶಾಸಕರಿಗೆ ಮುಂದಿನ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎನ್ನು ಆತಂಕ ಕಾಂಗ್ರೆಸ್ನಲ್ಲಿ ಮನೆ ಮಾಡಿದ್ದು. ಇದೀಗ ಈ ಬಗ್ಗೆ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ಸೇರಿರುವ 10 ಮಂದಿ ಶಾಸಕರಿಗೆ ಕಾಂಗ್ರೆಸ್ಗೆ ಪ್ರವೇಶ ಇಲ್ಲದಂತಾಗಿದೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ್ ಚೋಡಣಕರ್, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರಿರುವ ಹತ್ತು ಮಂದಿ ಶಾಸಕರನ್ನು ಸನರ್ಹಗೊಳಿಸುವಂತೆ ಮುಂಬೈ ಉಚ್ಛ ನ್ಯಾಯಾಲಯದ ಗೋವಾ ಪೀಠದ ಮೆಟ್ಟಿಲೇರಿದ್ದಾರೆ.