ಹೈದರಾಬಾದ್, ಜೂ 19 (DaijiworldNews/PY): "ಫ್ರಾನ್ಸ್ನಿಂದ ಭಾರತಕ್ಕೆ ಆಗಮಿಸಿರುವ 36 ರಫೇಲ್ ಯುದ್ಧ ವಿಮಾನಗಳನ್ನು ಮುಂದಿನ ವರ್ಷದೊಳಗೆ ವಾಯುಪಡೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ತಿಳಿಸಿದರು.
ಶನಿವಾರ ದುಗಾಲ್ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಕಂಬೈಡ್ ಗ್ರಾಜುಯೇಶನ್ ಪರೇಡ್ ಕಾರ್ಯಕ್ರಮದಲ್ಲಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ವರ್ಷದೊಳಗೆ ಫ್ರಾನ್ಸ್ನಿಂದ ಭಾರತಕ್ಕೆ ಬಂದಿರುವ 36 ರಫೇಲ್ ಯುದ್ಧ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಕೊರೊನಾ ಹಿನ್ನೆಲೆ ಒಂದೆರಡು ವಿಮಾನಗಳು ಬರುವುದು ವಿಳಂಬವಾಗಿದೆ. ಇನ್ನುಳಿದ ವಿಮಾನಗಳೆಲ್ಲವೂ ನಿಗದಿತ ಸಮಯಕ್ಕೆ ಬಂದಿವೆ. ವಿಮಾನಗಳನ್ನು ನಿಗದಿತ ಸಮಯದಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು" ಎಂದಿದ್ದಾರೆ.
"ನಾನು ಈಗಾಗಲೇ ಎಲ್ಲಾ ವಿಮಾನಗಳ ಕಾರ್ಯನಿರ್ವಹಣೆಯನ್ನು ಸಂಪೂರ್ಣಗೊಳಿಸಿದ್ದೇವೆ. ಈ ಹಿನ್ನೆಲೆ ನಿಗದಿತ ಸಮಯದಲ್ಲಿ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯಲಿದೆ" ಎಂದು ಹೇಳಿದ್ದಾರೆ.