ನವದೆಹಲಿ, ಜೂ 19 (DaijiworldNews/PY): ಸೇನಾ ಅಧಿಕಾರಿಯಂತೆ ಸಮವಸ್ತ್ರ ಧರಿಸಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಕ್ಯಾಪ್ಟನ್ ಎಂದು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಹನಿಟ್ಯ್ರಾಪ್ಗೆ ಯತ್ನಿಸಿದೆ.
ಆರೋಪಿಯನ್ನು ನವದೆಹಲಿಯ ಮೋಹನ್ ಗಾರ್ಡನ್ ನಿವಾಸಿ ದಿಲೀಪ್ ಕುಮಾರ್ (40) ಎಂದು ಗುರುತಿಸಲಾಗಿದೆ. ಆರೋಪಿ ಬಳಿ ಇದ್ದ ದಿಲೀಪ್ ಕುಮಾರ್ ಹೆಸರಿನಲ್ಲಿದ್ದ ನಕಲಿ ಸೇನಾ ಗುರುತು ಕಾರ್ಡ್ ಸೇರಿದಂತೆ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗುಪ್ತ ಮಾಹಿತಿಯ ಮೇರೆಗೆ ಪೊಲೀಸ್ ತಂಡ ಅರ್ಚನಾ ರೆಡ್ ಲೈಟ್ ಬಳಿ ನಿಯೋಜನೆ ಮಾಡಲಾಗಿದ್ದು, ಸೇನಾ ಸಮವಸ್ತ್ರ ಧರಿಸಿದ್ದ ಆರೋಪಿಯನ್ನು ಬಂಧಿಸಲಾಯಿತಿ ಎಂದು ವರದಿ ತಿಳಿಸಿದೆ.
ವಿಚಾರಣೆ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರನ್ನು ಆಕರ್ಷಿಸಲು ಭಾರತೀಯ ಸೇನೆಯ ಕ್ಯಾಪ್ಟನ್ ಶೇಖರ್ ರೀತಿ ಪೋಸ್ ನೀಡಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ವರದಿ ತಿಳಿಸಿದೆ.
ಕೆಲ ವಿದೇಶಿ ಪ್ರೆಗಳ ಜೊತೆ ಈತ ವಾಟ್ಸ್ಯಾಪ್ ಚಾಟ್ ಮಾಡಿದ್ದು, ಅವರ ಜೊತೆ ಕೆಲ ವಿಡಿಯೋಗಳನ್ನು ಹಂಚಿಕೊಂಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ವರದಿ ವಿವರಿಸಿದೆ.