ಬೆಂಗಳೂರು, ಜೂ. 19 (DaijiworldNews/HR): ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅದು ಯಾವತ್ತಿದ್ದರೂ ಒಂದಾಗುವುದಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದಲ್ಲಿ ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ" ಎಂದರು.
ಇನ್ನು ಕಾಂಗ್ರೆಸ್ ಯಾವತ್ತಿದ್ದರೂ ಒಡೆದ ಮನೆಯಾಗಿದ್ದು, ದೇಶದಲ್ಲಿ ಹಲವು ಕಾಂಗ್ರೆಸ್ಗಳಿವೆ. ಈಗ ರಾಜ್ಯದಲ್ಲಿ ಮತ್ತೆರಡು ಕಾಂಗ್ರೆಸ್ ಹುಟ್ಟಿಕೊಳ್ಳಲಿದ್ದು, ಆ ಪಕ್ಷವು ಯಾವತ್ತೂ ಒಂದಾಗುವುದಿಲ್ಲ" ಎಂದು ಟೀಕಿಸಿದರು.
ಮಳೆ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ 29 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ, ಮಂಡ್ಯ ಹೊರತುಪಡೆಸಿ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಕೆಲವು ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರ ಮಾಡಲು ಸಮುದಾಯ ಭವನಗಳನ್ನು ಮೀಸಲಿಡಲಾಗಿದೆ" ಎಂದು ತಿಳಿಸಿದ್ದಾರೆ.