ನವದೆಹಲಿ, ಜೂ. 19 (DaijiworldNews/HR): ಭಾರತದಲ್ಲಿ ಕೊರೊನಾ ಮೂರನೇ ಅಲೆ ತಡೆಯಲಾಗಲ್ಲ. ಮುಂದಿನ ಆರರಿಂದ ಎಂಟು ವಾರಗಳಲ್ಲಿ ಅದು ದೇಶಕ್ಕೆ ಅಪ್ಪಳಿಸಬಹುದು ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಏಮ್ಸ್ ಮುಖ್ಯಸ್ಥರು, "ನಾವು ಅನ್ಲಾಕ್ ಮಾಡಲು ಪ್ರಾರಂಭಿಸಿರುವುದರಿಂದ, ಕೊರೊನಾ ಮತ್ತೆ ಹೆಚ್ಚಬಹುದು. ಮೊದಲ ಮತ್ತು ಎರಡನೇ ಅಲೆಯ ನಡುವೆ ಏನಾಯಿತು ಎಂದು ನಾವು ಕಲಿತಂತೆ ಕಾಣುತ್ತಿಲ್ಲ, ಪಡೆ ಪದೇ ಜನಸಂದಣಿ ಸ್ಸೇರುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಏರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕೊರೊನಾ ಸೂಕ್ತ ನಡವಳಿಕೆ ಮತ್ತು ಜನಸಂದಣಿಯನ್ನು ತಡೆಗಟ್ಟುವ ವಿಷಯದಲ್ಲಿ ನಾವು ಹೇಗೆ ಮುಂದುವರಿಯುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ" ಎಂದಿದ್ದಾರೆ.
ಇನ್ನು "ಭಾರತದಲ್ಲಿ ಕೊರೊನಾದ ಮೊದಲ ಅಲೆಯ ಸಮಯದಲ್ಲಿ ವೈರಸ್ ಅಷ್ಟು ವೇಗವಾಗಿ ಹರಡುತ್ತಿರಲಿಲ್ಲ. ಎರಡನೇ ಅಲೆಯ ಸಮಯದಲ್ಲಿ ವೈರಸ್ ಹೆಚ್ಚು ಹರಡುವುದಕ್ಕೆ ಪ್ರಾರಂಭವಾಯಿತು. ಈಗ ಹರಡುತ್ತಿರುವ ಡೆಲ್ಟಾ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ" ಎಂದು ಮಾಹಿತಿ ನೀಡಿದ್ದಾರೆ.