ನವದೆಹಲಿ, ಜೂ 19(DaijiworldNews/MS): ಭಾರತೀಯ ನಾಗರಿಕ ಸೇವಾ ವಿಭಾಗದ ಹಿರಿಯ ಅಧಿಕಾರಿ, ಕೈಗಾರಿಕೆ ಮತ್ತು ಆಂತರಿಕಆಂತರಿಕ ವ್ಯವಹಾರ (ಡಿಪಿಐಐಟಿ) ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಗುರುಪ್ರಸಾದ್ ಮೋಹಪಾತ್ರ ಶುಕ್ರವಾರ ನಿಧನರಾಗಿದ್ದಾರೆ . ಕೋವಿಡ್ ಸಾಂಕ್ರಮಿಕದಿಂದ ಬಳಲುತ್ತಿದ್ದ ಅವರು ನವದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗುರುಪ್ರಸಾದ್ ಅವರ ಸಾವಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಂತಾಪ ಸೂಚಿಸಿದ್ದಾರೆ.ಅತ್ಯುತ್ತಮ ಅಧಿಕಾರಿಯಾಗಿದ್ದ ಮಹಾಪಾತ್ರ ಅವರು ದೇಶದ ಬೆಳವಣಿಗೆಗೆ ತಮ್ಮದೇ ಆದ ಸೇವೆ ಸಲ್ಲಿಸಿದ್ದರು ಎಂದು ಗೋಯಲ್ ಬಣ್ಣಿಸಿದ್ದಾರೆ.
ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಹಾಪಾತ್ರ ಅವರು, 2019ರಲ್ಲಿ ಕೈಗಾರಿಕಾ ಇಲಾಖೆಯ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು.
ಕಳೆದ ಏಪ್ರಿಲ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
"ಡಿಪಿಐಐಟಿ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮೋಹಪಾತ್ರ ಅವರ ನಿಧನದಿಂದ ಬೇಸರವಾಯಿತು. ನಾನು ಅವರೊಂದಿಗೆ ಗುಜರಾತ್ ಮತ್ತು ಕೇಂದ್ರದಲ್ಲಿಯೂ ಕೆಲಸ ಮಾಡಿದ್ದೆ. ಅವರು ಆಡಳಿತಾತ್ಮಕ ವಿಷಯಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದರು. ಎಂದು ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.