ಗುವಾಹಟಿ, ಜೂ 19 (DaijiworldNews/PY): "ಅಸ್ಸಾಂನಲ್ಲಿ ಶನಿವಾರ ಮುಂಜಾನೆ 4.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದು ಈಶಾನ್ಯ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಐದನೇ ಭೂಕಂಪನವಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಶುಕ್ರವಾರ ತಡರಾತ್ರಿ ಭೂಕಂಪನ ಸಂಭವಿಸಿದೆ. ಸೋನಿತ್ಪುರ ಜಿಲ್ಲೆಯ ತೇಜಾಪುರದಲ್ಲಿ 30 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪನದ ವೇಳೆ ಯಾವುದೇ ಸಾವು-ನೋವು ಸಂಭವಿಸಿಲ್ಲ" ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ಶುಕ್ರವಾರ ಎರಡು ಬಾರಿ ಭೂಮಿ ಕಂಪಿಸಿದೆ. ಸೋನಿತ್ಪುರ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ.
"ಅಸ್ಸಾಂನೊಂದಿಗೆ ಮಣಿಪುರದ ಚಂದೇಲಾ ಜಿಲ್ಲೆಯಲ್ಲಿಯೂ 3ರಷ್ಟು ಭೂಕಂಪನ ದಾಖಲಾಗಿದ್ದು, ಮೇಘಾಲಯದ ಪಶ್ಚಿಮ ಖಶಿ ಹಿಲ್ ಜಿಲ್ಲೆಯಲ್ಲಿ 2.6 ತೀವ್ರತೆಯಲ್ಲಿ ಭೂಕಂಪಿಸಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.