ಮೈಸೂರು, ಜೂ 19 (DaijiworldNews/PY): ಮನೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಕಂದಮ್ಮ ದುರಂತ ಅಂತ್ಯ ಕಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಮಗುವನ್ನು ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರರಾಜ್ ಎಂಬವರ ಎರಡು ವರ್ಷದ ಮಗು ಸಮರ್ಥ್ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ನಾಪತ್ತೆಯಾಗಿತ್ತು. ಮನೆ ಮಂದಿಯೆಲ್ಲಾ ಅಕ್ಕ-ಪಕ್ಕದ ಮೆನಯಲ್ಲೂ ಹುಡುಕಾಡಿದರು ಮಗು ಪತ್ತೆಯಾಗಿಲ್ಲ. ಕೊನೆಗೆ ಮನೆಯ ಬಾತ್ ರೂಂ ಬಳಿ ಹೋಗಿ ನೋಡಿದ ಸಂದರ್ಭ ನೀರು ತುಂಬಿದ್ದ ಬಕೆಟ್ ಒಳಗೆ ಮಗು ಮೃತಪಟ್ಟಿರುವುದು ತಿಳಿದುಬಂದಿದೆ.
ಘಟನೆಯ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.