ನವದೆಹಲಿ, ಜೂ. 18 (DaijiworldNews/SM): ಕೋವಿಡ್ ವ್ಯಾಕ್ಸಿನೇಷನ್ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ಎಲ್ಲರೂ ಲಸಿಕೆಗಾಗಿ ಹಾತೊರೆಯುತ್ತಿದ್ದಾರೆ. ಲಸಿಕೆ ಪಡೆದರೂ ಸೋಂಕು ವಕ್ಕರಿಸುತ್ತದೆ ಎನ್ನಲಾಗುವ ವಾದವಿದ್ದು, ಆದರೆ, ಸೋಂಕಿನ ತೀವ್ರತೆ ಮಾತ್ರ ಕಡಿಮೆ ಇರುತ್ತದೆ. ಅಲ್ಲದೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸೋಂಕು ತಗುಲಿದರೂ ಆರೋಗ್ಯ ಕಾರ್ಯಕರ್ತರಲ್ಲಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇಕಡಾ 75-80ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನ ನಡೆಸಿದ ಬಳಿಕ ಆರೋಗ್ಯ ಸಚಿವಾಲಯ ತಿಳಿಸಿದೆ.
ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಶೇಕಡಾ 8ರಷ್ಟು ಮಂದಿಗೆ ಆಮ್ಲಜನಕದ ಅಗತ್ಯತೆ ಬರಬಹುದು. ಆದರೆ, ಐಸಿಯುಗೆ ದಾಖಲಾಗುವ ಅಪಾಯ ಕಡಿಮೆ ಇದೆ. ಶೇ. ೬ರಷ್ಟು ಮಂದಿ ಮಾತ್ರ ಐಸಿಯುಗೆ ದಾಖಲಾಗುವ ಸಾಧ್ಯತೆ ಬರಬಹುದೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಮೇ 7 ರಂದು ಗರಿಷ್ಠ ಪ್ರಕರಣಗಳು ವರದಿಯಾದಾಗಿನಿಂದ ದೈನಂದಿನ ಹೊಸ ಪ್ರಕರಣಗಳಲ್ಲಿ ಬಹುತೇಕ ಶೇಕಡಾ 85 ರಷ್ಟು ಕುಸಿತ ಕಂಡುಬಂದಿದೆ.