ನವದೆಹಲಿ, ಜೂ. 18 (DaijiworldNews/HR): ದೆಹಲಿಯ ಬಾಬಾ ಕಾ ಡಾಬಾದ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಕಾಂತಾ ಪ್ರಸಾದ್ ಅವರನ್ನು ಗುರುವಾರ ರಾತ್ರಿ 11.15ಕ್ಕೆ ಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮದ್ಯಪಾನ ಹಾಗೂ ನಿದ್ರಾ ಮಾತ್ರೆಗಳು ಪ್ರಜ್ಞಾಹೀನತೆಗೆ ಕಾರಣವಾಗಿದೆ ಎಂಬುದು ಉಲ್ಲೇಖವಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಇನ್ನು ಪ್ರಸಾದ್ ಅವರ ಪುತ್ರ ಕರಣ್ ಹೇಳಿಕೆಯನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಳೆದ ವರ್ಷ ಲಾಕ್ಡೌನಿಂದಾಗಿ ಹೋಟೆಲ್ನಲ್ಲಿ ಗ್ರಾಹಕರ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವುದರ ಬಗ್ಗೆ ಪ್ರಸಾದ್ ಕಣ್ಣೀರಿಡುತ್ತಾ ಮಾತನಾಡಿರುವ ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊವನ್ನು ಯೂಟ್ಯೂಬರ್ ಗೌರವ್ ವಾಸನ್ ಎಂಬುವವರು ಬಿಡುಗಡೆಗೊಳಿಸಿದ್ದರು.