ಬೆಂಗಳೂರು, ಜೂ 18 (DaijiworldNews/MS): ರಾಜ್ಯ ಸರ್ಕಾರ ದ್ವಿತೀಯ ಪಿಯು ಪರೀಕ್ಷೆಯನ್ನು ಕೊರೋನಾ ಕಾರಣದಿಂದಾಗಿ ರದ್ದು ಪಡಿಸಿ, ವಿದ್ಯಾರ್ಥಿಗಳನ್ನು ಗ್ರೇಡ್ ಆಧಾರದಲ್ಲಿ ಉತ್ತೀರ್ಣಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ ಇದೀಗ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿರುವ ಸರ್ಕಾರ ಗ್ರೇಡ್ ಬದಲಾಗಿ ಅಂಕಗಳ ಆಧಾರದ ಮೇಲೆಯೇ ಫಲಿತಾಂಶ ಪ್ರಕಟಗೊಳಿಸುವುದಾಗಿ ಹೇಳಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸ್ನೇಹಲ್ , " ದ್ವಿತೀಯ ಪಿ.ಯು ಫಲಿತಾಂಶವನ್ನು ಗ್ರೇಡ್ ಮಾದರಿಯಲ್ಲಿ ಪ್ರಕಟಿಸುವುದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಇದರಿಂದಾಗಿ ಈ ಕ್ರಮವನ್ನು ಬದಲಿಸಲಾಗುತ್ತಿದ್ದು, ಹಳೆಯ ಪದ್ದತಿಯಂತೆಯೇ ಅಂಕಗಳ ಮಾದರಿಯಲ್ಲಿ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಗ್ರೇಡ್ ಮಾದರಿ ಅಂಕಗಳು ನೀಡಿದರೆ ವಿದ್ಯಾರ್ಥಿಗಳಿಗೆ ಮುಂದಿನ ಉದ್ಯೋಗಾವಕಾಶದ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಿ , ದ್ವಿತೀಯ ಪಿಯು ಫಲಿತಾಂಶವನ್ನು ಹಳೆಯ ಮಾದರಿಯಲ್ಲಿಯೇ ಅಂಕಗಳ ರೀತಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಪ್ರಕಟಿಸುವುದಾಗಿ ಇಲಾಖೆ ಹೇಳಿತ್ತು. ಆದರೆ 2020-21ರ ದ್ವಿತೀಯ ಪಿಯು ಫಲಿತಾಂಶ ಕುರಿತಂತೆ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳೋವರೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ ನೀಡಿದೆ.