ಲಕ್ನೋ, ಜೂ. 18 (DaijiworldNews/HR): ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖಮಂತ್ರಿ ಬಾಲ್ ಸೇವಾ ಯೋಜನೆಯಡಿ ಮಾಸಿಕ 4,000 ರೂ. ಅನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಯೋಗಿ ಆದಿತ್ಯನಾಥ್, "ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರ್ಕಾರವು ತಿಂಗಳಿಗೆ 4,000 ರೂ. ನೀಡಲಿದ್ದು, ಅವರು ಮುಖಮಂತ್ರಿ ಬಾಲ್ ಸೇವಾ ಯೋಜನೆಯಡಿ 18 ವರ್ಷ ತುಂಬುವವರೆಗೆ ಪಡೆಯಲಿದ್ದಾರೆ" ಎಂದು ತಿಳಿಸಿದರು.
ಇನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಪ್ರಸ್ತುತ ತಾಂತ್ರಿಕ ಕೋರ್ಸ್ಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ದಾಖಲಾದ ಮಕ್ಕಳಿಗೆ ರಾಜ್ಯ ಸರ್ಕಾರವು ಅವರಿಗೆ ಉಚಿತ ಶಿಕ್ಷಣದ ಜೊತೆಗೆ ಟ್ಯಾಬ್ಲೆಟ್ ನೀಡಲಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕೊರೊನಾದಿಂದ ತಮ್ಮ ಹೆತ್ತವರನ್ನು ಅಥವಾ ಕಾನೂನು ಪಾಲಕರನ್ನು ಕಳೆದುಕೊಂಡಿರುವ ಮಕ್ಕಳು ಮತ್ತು ಯುವ ವಯಸ್ಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎನ್ನಲಾಗಿದೆ.