ಬೆಂಗಳೂರು, ಜೂ 18 (DaijiworldNews/PY): "ಜೂನ್ 21ರ ಬಳಿಕ ಕೊರೊನಾ ಲಾಕ್ಡೌನ್ ನಿಯಮಾವಳಿಗಳನ್ನು ಮತ್ತಷ್ಟು ಸಡಿಲಗೊಳಿಸಬೇಕೆ ಎನ್ನುವ ವಿಚಾರದ ಬಗ್ಗೆ ಶನಿವಾರ ನಿರ್ಧರಿಸಲಾಗುವುದು" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
"ಈಗ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ, ಮೂರನೇ ಅಲೆ ಅಪ್ಪಳಿಸುವ ಆತಂಕ ಇರುವ ಕಾರಣ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ಜೂನ್ 14ರಿಂದ 20 ಜಿಲ್ಲೆಗಳಲ್ಲಿ ಭಾಗಶಃ ಲಾಕ್ಡೌನ್ ತೆರವು ಮಾಡಲಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸಲಾಗಿತ್ತು.
ಜೂನ್ 21ರ ಬೆಳಗ್ಗೆ 5 ಗಂಟೆಗೆ ಲಾಕ್ಡೌನ್ ನಿಯಾಮಾವಳಿಗಳ ಸಡಿಲಿಕೆ ಮುಗಿಯಲಿದೆ.