ನವದೆಹಲಿ, ಜೂ. 18 (DaijiworldNews/HR): ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸಿದ್ದ ಮುಂಚೂಣಿ ಹೋರಾಟಗಾರರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ.
ವಿಡಿಯೊ ಸಂವಾದ ಮೂಲಕ ಕೊರೊನಾ ಮುಂಚೂಣಿ ಹೋರಾಟಗಾರರಿಗೆ ಆಯೋಜಿಸಿದ್ದ ಕ್ರ್ಯಾಶ್ ಕೋರ್ಸ್ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದಾರೆ.
ಈ ವೇಳೆ ಪ್ರಧಾನಿ ಮೋದಿಯವರು ಕೊರೋನಾ ಮುಂಚೂಣಿ ಹೋರಾಟಗಾರರನ್ನು ಪ್ರಶಂಶಿಸಿ ದೇಶದಲ್ಲಿ 1 ಲಕ್ಷ ಮುಂಚೂಣಿ ಹೋರಾಟಗಾರರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು "ಈ ಕಾರ್ಯಕ್ರಮದ ಮೂಲಕ ವಿಷ್ಯದ ಆರೋಗ್ಯದ ಕ್ಷೇತ್ರದ ಮಾನವ ಸಂಪನ್ಮೂಲದ ಅಗತ್ಯತೆಗಳನ್ನು ನೀಗಿಸಲು ಕೌಶಲ್ಯ ಹೊಂದಿದ ವೈದ್ಯಕೀಯೇತರ ಆರೋಗ್ಯ ಕಾರ್ಯಕರ್ತರನ್ನು ಸೃಷ್ಟಿಸಲಾಗುತ್ತದೆ" ಎನ್ನಲಾಗಿದೆ.