ಹಾಸನ, ಜೂ.17 (DaijiworldNews/HR): "ಸಿದ್ದರಾಮಯ್ಯ ಅವರು ಇಲ್ಲದಿದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಝೀರೋ ಆಗುತ್ತದೆ" ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಿದ್ದರಾಮಯ್ಯ ಇಲ್ಲದಿರುತ್ತಿದ್ದರೆ ಕರ್ನಾಟಕದಲ್ಲು ಕಾಂಗ್ರೆಸ್ ಪಕ್ಷ ಮುಳುಗಿ ಹೋಗುತ್ತಿತ್ತು. ಸಿದ್ದರಾಮಯ್ಯ ಕೈ ಬಿಟ್ರೆ ಈಗಲೂ ಮುಳುಗುತ್ತೆ. ಸದ್ಯ ಕಾಂಗ್ರೆಸ್ನನ್ನು ಶೇ.70ಕ್ಕೆ ನಿಲ್ಲಿಸಿರೋದು ಸಿದ್ದರಾಮಯ್ಯ" ಎಂದರು.
"ದಿನ ಬೆಳಗಾದ್ರೆ ಸೀಮೆಎಣ್ಣೆ ಡಬ್ಬ ಹಿಡ್ಕೊಂಡ್ರೆ ಏನು ಮಾಡುದಕ್ಕೂ ಆಗುವುದಿಲ್ಲ, ಅದಕ್ಕೆ ಕಾಂಗ್ರೆಸ್ ಮುಳುಗಿ ಹೋಗ್ತಿರೋದು. ನಿತ್ಯ ಪ್ರತಿಭಟನೆ ಮಾಡಿಬಿಟ್ಟರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುತ್ತಾರಾ? ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದೇ ಕಾಂಗ್ರೆಸ್. ಆ ಶಾಪ ಕಾಂಗ್ರೆಸ್ ಮೇಲಿದೆ" ಎಂದಿದ್ದಾರೆ.
ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನೆಗೆ ಕೊಟ್ಟಿದ್ದ ಭೇಟಿ ರಾಜಕೀಯ ಉದ್ದೇಶ ಅಲ್ಲ, ಹೊಳೆನರಸೀಪುರ ಪೊಲೀಸ್ ಠಾಣೆ ವಿಚಾರಕ್ಕೆ ಹೋಗಿದ್ದೆ ಎಂದು ತಿಳಿಸಿದ್ದಾರೆ.