ಬೆಂಗಳೂರು, ಜೂ 17 (DaijiworldNews/MS): 2020-21 ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಿದಂತೆ ಹೈಕೋರ್ಟ್ ತಡೆ ನೀಡಿದೆ. ರಾಜ್ಯ ಸರ್ಕಾರವು ದ್ವಿತೀಯ ಪಿಯು ಫಲಿತಾಂಶ ಕುರಿತಂತೆ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ಹೈಕೋರ್ಟ್ ನ ನ್ಯಾಯಮೂರ್ತಿ ಬಿ ವಿ ನಾಗರತ್ನ ನೇತೃತ್ವದ ನ್ಯಾಯ ಪೀಠ ಮದ್ಯಂತರ ತಡೆ ನೀಡಿದೆ.
ಕೊವೀಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತೀರ್ಣಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ 76 ಸಾವಿರ ದ್ವಿತೀಯ ಪಿಯುಸಿ ರಿಪೀಟರ್ಸ್ ಗಳ ಪರೀಕ್ಷೆ ನಡೆಸುವ ಬಗ್ಗೆ ಆಕ್ಷೇಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇಂದಿಗೆ ಮುಂದೂಡಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ಕೈಗೊಂಡ ಹೈಕೋರ್ಟ್ ನ ನ್ಯಾಯ ಪೀಠದ ಮುಂದೆ, ಪಿಯು ಮಂಡಳಿಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು, 76 ಸಾವಿರ ದ್ವಿತೀಯ ಪಿಯುಸಿ ರಿಪೀಟರ್ಸ್ ಗಳ ಕುರಿತಂತೆ ತಜ್ಞರ ಸಮಿತಿಯ ಸಲಹೆ ಆಧರಿಸಿ ತೀರ್ಮಾನವನ್ನು 15 ದಿನಗಳಲ್ಲಿ ಕೈಗೊಳ್ಳಲಾಗುತ್ತದೆ ಆದರೆ ಖಾಸಗಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಅನಿವಾರ್ಯವಾಗಿದೆ ಎಂದು ನ್ಯಾಯಾಲಯದ ಮುಂದೆ ಮಾಹಿತಿಯನ್ನು ನೀಡಿದರು.
ಆದರೆ ಪೀಠವು, ರಿಪೀಟರ್ಸ್, ಸಾಮಾನ್ಯ ವಿದ್ಯಾರ್ಥಿಗಳು ಎನ್ನುವಂತ ತಾರತಮ್ಯ ಬೇಡ. 2020-21ರ ದ್ವಿತೀಯ ಪಿಯು ಫಲಿತಾಂಶ ಕುರಿತಂತೆ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳೋವರೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸದಂತೆ ಸೂಚನೆ ನೀಡಿ ವಿಚಾರಣೆಯನ್ನು ಜುಲೈ.5ಕ್ಕೆ ಮುಂದೂಡಿದರು.