ಬೆಂಗಳೂರು, ಜೂ.17 (DaijiworldNews/HR): ಸಿದ್ದರಾಮಯ್ಯ ಅವರು ನಾನೇ ಬಾಹುಬಲಿ ಅಂತ ಹೋಗುತ್ತಿದ್ದು, ಮತ್ತೊಂದೆಡೆ ಡಿ.ಕೆ ಶಿವಕುಮಾರ್ ಕಟ್ಟಪ್ಪ ರೀತಿ ಖಡ್ಗ ಹಿಡಿದು ಹೋಗುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಾಹುಬಲಿಯ ರೀತಿ ಹಾಗೂ ಡಿ.ಕೆ ಶಿವಕುಮಾರ್ ಕಟ್ಟಪ್ಪನ ರೀತಿ ಮಾಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕಾಗಿ ಷಡ್ಯಂತ್ರ ನಡೆಸುತ್ತಿದ್ದು, ಇದರ ಬಗ್ಗೆ ಅರುಣ್ ಸಿಂಗ್ ಅವರ ಬಳಿ ಹೇಳಿದ್ದೇನೆ" ಎಂದರು.
ಇನ್ನು ಕರ್ನಾಟಕದ ನಾಯಕತ್ವ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದು, ಬಿಜೆಪಿಯಲ್ಲಿ ಪಾರ್ಲಿಮೆಂಟರಿ ಬೋರ್ಡ್ ಇದೆ. ಅವರು ನಿರ್ಧಾರ ಮಾಡಿದರೆ ಮುಗಿಯಿತು. ಯಾವುದೇ ಗೊಂದಲಗಳಿಲ್ಲ. ಯಾವುದೇ ತೀರ್ಮಾನ ಇದ್ದರೂ ಹೈಕಮಾಂಡ್ ನಿರ್ಧರಿಸುತ್ತೆ" ಎಂದು ಹೇಳಿದ್ದಾರೆ.