ಬೆಳಗಾವಿ, ಜೂ.17 (DaijiworldNews/HR): ಸಚಿವ ಕೆ.ಎಸ್. ಈಶ್ವರಪ್ಪ ಅವರು ವಲಸಿಗರಿಗೆ ಹೆಚ್ಚು ಮಹತ್ವ ಕೊಟ್ಟಿದ್ದು, ಅವರು ಬಹಳ ಓಪನ್ ಹಾರ್ಟ್ ಮನುಷ್ಯ. ನಮ್ಮ ಬಗ್ಗೆ ಏನೂ ಕೆಟ್ಟದಾಗಿ ಮಾತನಾಡಿಲ್ಲ" ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಈಶ್ವರಪ್ಪ ಅವರು ವಲಸಿಗರ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿದ್ದು, ನಿಮ್ಮ ಆಶೀರ್ವಾದದಿಂದಲೇ ನಾವು ಸಚಿವರಾಗಿ ಈ ಕುರ್ಚಿ ಮೇಲೆ ಕುಳಿತುಕೊಂಡಿದ್ದೇವೆ ಎಂಬುದಾಗಿ ಆಗಾಗ ನನಗೆ ಹೇಳುತ್ತಾರೆ "ಎಂದರು.
ಇನ್ನು "ಈಶ್ವರಪ್ಪ ವಲಸಿಗರ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಾಧ್ಯವೇ ಇಲ್ಲ ಕೆಲ ಮಾಧ್ಯಮದವರು ಅದನ್ನು ತಿರುಚಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಯನ್ನು ಟಿವಿಯಲ್ಲಿ ತೋರಿಸುವುದಿಲ್ಲ. ಹಿಂದುಳಿದ ವರ್ಗದ ನಾಯಕನನ್ನು ತುಳಿಯುವ ಕೆಲಸವನ್ನು ಕೆಲವರು ಮಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.