ಅಮರಾವತಿ, ಜೂ 16 (DaijiworldNews/PY): ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆ ಬೇಗಲಮಟ್ಟೆ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ ಆರು ಮಂದಿ ನಿಷೇಧಿತ ಮಾವೋವಾದಿಗಳು ಸಾವನ್ನಪ್ಪಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಎನ್ಕೌಂಟರ್ನಲ್ಲಿ ಮೃತಪಟ್ಟವರ ಪೈಕಿ ಮಾವೋವಾದಿ ಸಂಘಟನೆಯ ಹಿರಿಯ ನಾಯಕ ಹಾಗೂ ಓರ್ವ ಮಹಿಳಾ ಸದಸ್ಯೆ ಸೇರಿದ್ದಾಳೆ ಎಂದು ತಿಳಿದುಬಂದಿದೆ.
"ಗುಂಡಿನ ಚಕಮಕಿಯ ಬಳಿಕ ಕೆಲ ನಕ್ಸಲರು ಪರಾರಿಯಾಗಿದ್ದಾರೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ" ಎಂದು ಡಿಜಿಪಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳದಿಂದ ಎ.ಕೆ 47 ಬಂದೂಕು ಸೇರಿದಂತೆ ಎಸ್ಎಲ್ಆರ್ ಬಂದೂಕು, ಮೂರು 303 ಬಂದೂಕುಗಳು, ಒಂದು ಕಂಟ್ರಿ ರಿವಾಲ್ವಾರ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.