ನವದೆಹಲಿ, ಜೂ 16 (DaijiworldNews/PY): "ದೇಶಕ್ಕೆ ತ್ವರಿತ ಹಾಗೂ ಸಂಪೂರ್ಣ ವ್ಯಾಕ್ಸಿನೇಷನ್ನ ಅಗತ್ಯವಿದೆಯೇ ಹೊರತು ಬಿಜೆಪಿ ಸರ್ಕಾರದ ಸುಳ್ಳು ಹಾಗೂ ಟೊಳ್ಳಾದ ಘೋಷಣೆಗಳಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೇಂದ್ರ ಸರ್ಕಾರದ ನಿಷ್ಕ್ರಿಯತೆಯಿಂದ ಲಸಿಕೆಯ ಕೊರತೆಯಾಗಿದೆ. ದೇಶಕ್ಕೆ ತ್ವರಿತ ಹಾಗೂ ಸಂಪೂರ್ಣ ವ್ಯಾಕ್ಸಿನೇಷನ್ನ ಅವಶ್ಯಕತೆ ಇದೆ. ಬಿಜೆಪಿಯ ಸುಳ್ಳು ಹಾಗೂ ಟೊಳ್ಳು ಘೋಷಣೆಗಳಲ್ಲ" ಎಂದು ಟೀಕಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಘನತೆ ಉಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಈ ಯತ್ನಗಳು ಸೋಂಕು ವ್ಯಾಪಿಸಲು ಮತ್ತಷ್ಟು ಅವಕಾಶ ನೀಡುತ್ತಿದೆ. ಜನರು ಸಾಯುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ವಿಜ್ಞಾನಿಗಳ ಅನುಮತಿ ಇಲ್ಲದೇ ಸರ್ಕಾರವು ಅಸ್ಪ್ರಾಜೆನೆಕಾ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ಏರಿಸಿದೆ ಎಂದು ಆರೋಪಿಸಿರುವ ವರದಿಯನ್ನು ಕೂಡಾ ರಾಹುಲ್ ಗಾಂಧಿ ಅವರು ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.