ಇಂದೋರ್, ಜೂ 16 (DaijiworldNews/MS): ಮದ್ಯಪ್ರದೇಶದಲ್ಲಿ ಕೊವೀಡ್ ನಿಂದ ಗುಣಮುಖರಾದ ವ್ಯಕ್ತಿಯೊಬ್ಬರಿಗೆ ಗ್ರೀನ್ ಫಂಗಸ್ ಸೋಂಕು ತಗುಲಿರುವುದು ದೃಢವಾಗಿದೆ.
ಕೋವಿಡ್–19ನಿಂದ ಗುಣಮುಖರಾಗಿದ್ದ 34 ವರ್ಷದ ವ್ಯಕ್ತಿಯಲ್ಲಿ ‘ಹಸಿರು ಶಿಲೀಂಧ್ರ’ (ಗ್ರೀನ್ ಫಂಗಸ್, ಆ್ಯಸ್ಪರ್ಗಿಲೋಸಿಸ್) ಸೋಂಕು ಕಾಣಿಸಿಕೊಂಡಿದೆ. ರೋಗಿಯನ್ನು ಏರ್ ಆಂಬುಲೆನ್ಸ್ ಮೂಲಕ ಮುಂಬೈಗೆ ಕರೆದೊಯ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ಶ್ರೀ ಅರವಿಂದೊ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಎದೆರೋಗಗಳ ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ತಿಳಿಸಿದ್ದಾರೆ.
ಹೊಸ ರೋಗವಾದ ಆ್ಯಸ್ಪರ್ಗಿಲೋಸಿಸ್ ಸೋಂಕು, ಮತ್ತು ಶಿಲೀಂಧ್ರದ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ. ಆ್ಯಸ್ಪರ್ಗಿಲೋಸಿಸ್ ತುಲನಾತ್ಮಕವಾಗಿ ಅಸಾಮಾನ್ಯ ಸೋಂಕು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ
‘ಕೋವಿಡ್ನಿಂದ ಗುಣಮುಖರಾದರೂ ಈ ವ್ಯಕ್ತಿಯಲ್ಲಿ ವಿಪರೀತ ಜ್ವರ, ಮೂಗಿನಿಂದ ರಕ್ತಸ್ರಾವ ಕಾಣಿಸಿಕೊಂಡಿತು. ಕಪ್ಪು ಶಿಲೀಂಧ್ರ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಪರೀಕ್ಷೆ ಮಾಡಲಾಯಿತು. ಅವರಿಗೆ ‘ಹಸಿರು ಶಿಲೀಂಧ್ರ’ ಸೋಂಕು (ಆ್ಯಸ್ಪರ್ಗಿಲೋಸಿಸ್) ತಗುಲಿರುವುದು ದೃಢಪಟ್ಟಿತು’ ಎಂದು ಅವರು ಹೇಳಿದ್ದಾರೆ.
ಮಾತ್ರವಲ್ಲದೆ ಹಸಿರು ಶಿಲೀಂಧ್ರ' ತಗುಲಿದ ವ್ಯಕ್ತಿಗೆ ನೀಡಬೇಕಾದ ಚಿಕಿತ್ಸೆ ಹಾಗೂ ಔಷಧಿ ಕಪ್ಪು ಶಿಲೀಂಧ್ರಕ್ಕಿಂತ ಭಿನ್ನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ .