ಅಹಮದಾಬಾದ್, ಜೂ 16 (DaijiworldNews/PY): ಕಾರಿಗೆ ಟ್ರಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಹತ್ತು ಮಂದಿ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಗುಜರಾತ್ನ ಆನಂದ್ ಜಿಲ್ಲೆಯ ತಾರಾಪುರ ಹೆದ್ದಾರಿಯಲ್ಲಿ ನಡೆದಿದೆ.
ಕಾರಿನಲ್ಲಿದ್ದ ಒಂದೇ ಕುಟುಂಬದ ಹತ್ತು ಮಂದಿ ಸೂರತ್ನಿಂದ ಭಾವಾನಗರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭ ಇಂದ್ರನಾಜ್ ಗ್ರಾಮದ ಸಮೀಪ ಕಾರು ಟ್ರಕ್ಗೆ ಢಿಕ್ಕಿಯಾಗಿದ್ದು, ಇಬ್ಬರು ಮಹಿಳೆಯರು, ಏಳು ಪುರುಷರು ಹಾಗೂ ಮಗು ಸಾವನ್ನಪ್ಪಿದೆ.
ಅಪಘಾತದ ಬಳಿಕ ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಂತ್ರಸ್ತರ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಘಟನೆಯ ಬಗ್ಗೆ ತಾರಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.