ಶ್ರೀನಗರ, ಜೂ 16 (DaijiworldNews/PY): ಜಮ್ಮು-ಕಾಶ್ಮೀರದ ನೌಗಮ್ ಪ್ರದೇಶದ ವಾಗೂರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾಡೆಗಳು ಈರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ.
"ಎನ್ಕೌಂಟರ್ನಲ್ಲಿ ಅಪರಿಚಿತ ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ. ಶ್ರೀನಗರದ ನೌಗಾಮ್ ಪ್ರದೇಶದ ವಗೂರಾದಲ್ಲಿ ಎನ್ ಕೌಂಟರ್ ಆರಂಭವಾಗಿದೆ. ಭದ್ರತಾ ಪಡೆಗಳು ಕಾರ್ಯಪ್ರವೃತ್ತರಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಏ ಲಭ್ಯವಾಗಬೇಕಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಘಟನಾ ಪ್ರದೇಶದ ಎಲ್ಲಾ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳನ್ನು ಮುಚ್ಚಲಾಗಿದೆ. ಸ್ಥಳಕ್ಕೆ ಹೆಚ್ಚಿನ ಸೇನೆಯನ್ನು ರವಾನಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.