ನವದೆಹಲಿ, ಜೂ 16 (DaijiworldNews/MS): ಕೊವೀಡ್ ಲಸಿಕೆ ಪಡೆಯಲು ಮುಂಚಿತವಾಗಿ ಆನ್ ಲೈನ್ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಗ್ರಾಮೀಣ ಭಾಗದ ಜನತೆ ಲಸಿಕೆ ಪಡೆಯಲು ತೊಂದರೆಪಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ನೀತಿಯನ್ನು ಬದಲಾವಣೆ ಮಾಡಿದೆ.
18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ನೋಂದಾವಣೆ ಮಾಡಿಸಿಕೊಂಡು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಮುಂದಿನ ವಾರದಿಂದ ಕೊರೊನಾ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಜೂನ್ 13ರ ಮಾಹಿತಿ ಪ್ರಕಾರ, ಕೊವಿನ್ ಪೋರ್ಟಲ್ನಲ್ಲಿ ಲಸಿಕೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ 28.36 ಕೋಟಿ ಜನರ ಪೈಕಿ, 16.45 ಕೋಟಿ ಮಂದಿ (ಶೇಕಡಾ 58ರಷ್ಟು) ನೇರವಾಗಿ ವಾಕ್ಇನ್ (ನೋಂದಣಿ ಮಾಡದೆ) ಮೂಲಕ ಲಸಿಕೆ ಪಡೆದುಕೊಂಡವರಾಗಿದ್ದಾರೆ.