ಕಾಸರಗೋಡು, ಜೂ. 15 (DaijiworldNews/SM): ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಹಂತ ಹಂತವಾಗಿ ಕೇರಳದಲ್ಲಿ ಲಾಕ್ ಡೌನ್ ಹಿಂತೆಗೆಯಲು ಕೇರಳ ಸರಕಾರ ತೀರ್ಮಾನಿಸಿದೆ.
ಇದರಂತೆ ಜೂನ್ 17ರಿಂದ ಲಾಕ್ ಡೌನ್ ಸಡಿಲಿಕೆಗೆ ನಿರ್ಧರಿಸಲಾಗಿದೆ. ಪಾಸಿಟಿವಿಟ್ ರೇಟ್ 20 ಶೇಕಡಾಕ್ಕಿಂತ ಅಧಿಕ ಹೊಂದಿರುವ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಕಠಿಣ ನಿರ್ಬಂಧ ಜಾರಿಯಲ್ಲಿರಲಿದೆ. ಪಾಸಿಟಿವಿಟಿ ರೇಟ್ ಇಳಿಕೆಯಾಗಿರುವ ಸ್ಥಳಗಳಲ್ಲಿ ಮಾತ್ರ ಲಾಕ್ ಡೌನ್ ಸಡಿಲಿಕೆಗೆ ತೀರ್ಮಾನಿಸಲಾಗಿದೆ. ಪಾಸಿಟಿವ್ ರೇಟ್ 8 ಶೇಕಡಾಕ್ಕಿಂತ ಕಡಿಮೆ ಇರುವ ಸ್ಥಳಗಳಲ್ಲಿ ಸಂಪೂರ್ಣ ಆನ್ ಲಾಕ್ ಗೆ ನಿರ್ಧರಿಸಲಾಗಿದೆ.
ಪಾಸಿಟಿವಿಟಿ ದರ 30 ಶೇಕಡಾಕ್ಕಿಂತ ಅಧಿಕ ಇರುವ ಪ್ರದೇಶದಲ್ಲಿ ಟ್ರಿಪಲ್ ಲಾಕ್ ಡೌನ್ , ಪಾಸಿಟಿವಿಟಿ ದರ 20 ರಿಂದ 30ರ ನಡುವೆ ಇರುವ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ ಡೌನ್ ಪಾಸಿಟಿವಿಟಿ ದರ 8 ರಿಂದ 20ರ ನಡುವೆ ಇರುವ ಪ್ರದೇಶಗಳಲ್ಲಿ ಭಾಗಶಃ ಲಾಕ್ ಡೌನ್ ಹಾಗೂ ಪಾಸಿಟಿವಿಟಿ ದರ ಎಂಟರಿಂದ ಕಡಿಮೆಯಾಗಿದ್ದಲ್ಲಿ ನಿಯಂತ್ರಣಗಳೊಂದಿಗೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಎಲ್ಲಾ ದಿನ ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ ತೆರೆಯಬಹುದು. ಉಳಿದ ಅಂಗಡಿಗಳು ಸೋಮವಾರ, ಬುಧವಾರ, ಶುಕ್ರವಾರ ತೆರೆಯಬಹುದಾಗಿದೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.