ಮಂಡ್ಯ, ಜೂ.15 (DaijiworldNews/HR): ರಾಮಮಂದಿರ ನಿರ್ಮಾಣಕ್ಕೆ ಜನರು ನೀಡಿದ ಹಣ ದುರ್ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿಗೆ ಅವಮಾನ ಮಾಡಲಾಗಿದ್ದು, ಜನರು ಕೊಟ್ಟ ಹಣವನ್ನು ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಕೂಡಲೇ ಹಿಂದಿರುಗಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ದೇಶದ ಎಲ್ಲಾ ವರ್ಗದ ಜನರು ಸೇರಿ ಕೋಟ್ಯಂತರ ರೂಪಾಯಿ ಕೊಟ್ಟಿದ್ದಾರೆ. ದೇವಾಲಯ ನಿರ್ಮಾಣವಾಗುತ್ತದೆ ಎಂಬ ಉದ್ದೇಶದಿಂದ ದೇಣಿಗೆ ಕೊಟ್ಟಿದ್ದಾರೆ. ರಾಮಜನ್ಮ ಭೂಮಿಯಲ್ಲಿ ವಹಿವಾಟು ನಡೆಸಲು ಜನರು ಹಣ ಕೊಟ್ಟಿಲ್ಲ. ಅವ್ಯಹಾರದ ಮೂಲಕ ಜನರ ನಂಬಿಕೆ, ದೇವರಿಗೆ ಅವಮಾನ ಮಾಡಲಾಗಿದೆ" ಎಂದರು.
ಇನ್ನು "ಒಂದು ವರ್ಷದಿಂದ 51 ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದ್ದು, ತಿಂಗಳಿಂದೀಚೆಗೆ 17 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಹಣ ಲೂಟಿ ಮಾಡಲಾಗುತ್ತಿದೆದ್ದು, ಕೇಂದ್ರ ಸರ್ಕಾರ ಬಡವರ ಜೇಬನ್ನು ಪಿಕ್ ಪ್ಯಾಕೇಟ್ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.