ನವದೆಹಲಿ, ಜೂ 15( DaijiworldNews/MS): 2021 ರ ಹಜ್ ಯಾತ್ರೆಯ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತದ ಹಜ್ ಸಮಿತಿಯೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ -19 ರ ಹಿನ್ನೆಲೆಯಲ್ಲಿ ಭಾನುವಾರ ಸೌದಿ ಅರೇಬಿಯಾವು ವಿದೇಶದಿಂದ ಆಗಮಿಸುವ ಹಜ್ಗೆ ಯಾತ್ರಿಗರಿಗೆ ನಿಷೇಧಿಸಿತ್ತು. ಅಲ್ಲದೆ ಈ ಬಾರಿ ಸೌದಿ ಅರೇಬಿಯಾದಲ್ಲಿರುವ ನಾಗರಿಕರು ಮತ್ತು ನಿವಾಸಿಗಳಿಗೆ ಸೀಮಿತ ಸಂಖ್ಯೆಯಲ್ಲಿ ಅಂದರೆ ಕೇವಲ 1442 ಮಂದಿಗೆ ಮಾತ್ರ ಅನುಮತಿ ನೀಡಿದೆ. ಈ ಹಿನ್ನಲೆಯಲ್ಲಿ ಭಾರತದ ಹಜ್ ಸಮಿತಿಯೂ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿ ಆದೇಶಿಸಿದೆ.
ಕೊರೋನ ವೈರಸ್ನಿಂದಾಗಿ 2020ರ ಹಜ್ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಯಾತ್ರೆಗಾಗಿ 2.13 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಯಾತ್ರೆಯನ್ನು ರದ್ದುಗೊಳಿಸಿದ ಬಳಿಕ ಸರಕಾರವು ಶುಲ್ಕ ಮರುಪಾವತಿಯನ್ನು ಮಾಡಿತ್ತು