ಬೆಂಗಳೂರು, ಜೂ.15 (DaijiworldNews/HR): "ಬಿಜೆಪಿಯಲ್ಲಿ ಯಾವುದೇ ಬಣಗಳಿಗೆ ಅವಕಾಶ ಇಲ್ಲ, ನಮ್ಮಲ್ಲಿ ಬಿಜೆಪಿ ಬಣ ಬಿಟ್ಟರೆ ಯಾರ ಬಣವೂ ಇಲ್ಲ. ಗುಂಪು ಮಾಡಿಕೊಂಡರು ಕೂಡ ಯಾವುದಕ್ಕೂ ಮನ್ನಣೆಯಿಲ್ಲ" ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅರುಣ್ ಸಿಂಗ್ ಅವರು ಬುಧವಾರ ಸರ್ಕಾರದ ನೀತಿ, ಸುಧಾರಣೆ ಬಗ್ಗೆ ಚರ್ಚಿಸಬಹುದು. ಆಡಳಿತ ಸುಧಾರಣೆಯ ಬಗ್ಗೆ ಸಲಹೆ ಸೂಚನೆ ಕೊಡಲಿದ್ದು, ಅವರ ಭೇಟಿಯಲ್ಲೇನೂ ವಿಶೇಷವಿಲ್ಲ" ಎಂದರು.
ಇನ್ನು ರಾಜೀವ ಗಾಂಧಿ ಹಂಗಾಮಿ ಉಪ ಕುಲಪತಿ ನೇಮಕ ವಿಚಾರವಾಗಿ ಮಾತನಾಡಿದ ಅವರು, "ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದು ರಾಜ್ಯಪಾಲರಿಂದ ಬ್ಂದಿರುವ ನೇಮಕ. ಕಾನೂನು ಚೌಕಟ್ಟು ಬಿಟ್ಟು ಯಾರೂ ಏನು ಮಾಡಲು ಆಗಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಎಲ್ಲವೂ ಕೂಡ ಪಾರದರ್ಶಕವಾಗಿ ನಡೆಯುತ್ತದೆ. ಇಲ್ಲಿ ಯಾವುದೇ ವೈಯಕ್ತಿಕ ವಿಚಾರ ಬರುವುದಿಲ್ಲ" ಎಂದು ಹೇಳಿದ್ದಾರೆ.