ಹುಬ್ಬಳ್ಳಿ, ಜೂ 15 (DaijiworldNews/PY): ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಇಂಡಿಗೊ ವಿಮಾನ ಲ್ಯಾಂಡ್ ಆಗುವ ಸಂದರ್ಭ ವಿಮಾನದ ಒಂದು ಟೈಯರ್ ಸ್ಪೋಟಗೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಪಾರಾಗಿದ್ದಾರೆ.
ಪ್ರಾತಿನಿಧಿಕ ಚಿತ್ರ
ಇಂಡಿಗೊ ಫ್ಲೈಟ್ 6 ಇ -7979 ಎಟಿಆರ್, ಕಣ್ಣೂರಿನಿಂ ಹುಬ್ಬಳಿಗೆ ತೆರಳುತ್ತಿತ್ತು. ಸೋಮವಾರ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಟೈಯರ್ ಸ್ಪೋಟಗೊಂಡಿದೆ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.
ಪ್ರಸ್ತುತ ವಿಮಾನವು ಹುಬ್ಬಳಿಯಲ್ಲಿ ಪರಿಶೀಲನೆಯಲ್ಲಿದೆ.