ತಿರುವನಂತಪುರ, ಜೂ 15 (DaijiworldNews/PY): ಕೇರಳದ ರೋಮನ್ ಕ್ಯಾಥೋಲಿಕ್ ಚರ್ಚ್ನಿಂದ 2019ರಲ್ಲಿ ತಮ್ಮನ್ನು ಬಹಿಷ್ಕರಿಸಿರುವ ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರೆಷನ್ನ ತೀರ್ಮಾನವನ್ನು ಪ್ರಶ್ನಿಸಿ ಕೇರಳದ ಕ್ರೈಸ್ತ ಸನ್ಯಾಸಿನಿ ಲೂಸಿ ಕಲಪ್ಪುರ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವ್ಯಾಟಿಕನ್ ಸಿಟಿಯಲ್ಲಿರುವ ಕ್ಯಾಥೋಲಿಕ್ ಚರ್ಚ್ಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಗಳ ಪರಿಹಾರ ನ್ಯಾಯಾಧಿಕರಣ ಅಪೊಸ್ಟಾಲಿಕಾ ಸಿಗ್ನಾ ಚುರಾ ತಿರಸ್ಕರಿಸಿದೆ.
ಲೂಸಿ ಅವರ ಮೊದಲ ಮೇಲ್ಮನವಿಯನ್ನು ಅಪೊಸ್ಟಾಲಿಕಾ ಸಿಗ್ನಾ ಚುರಾ ಕಳೆದ ವರ್ಷ ತಿರಸ್ಕರಿಸಿತ್ತು. ಈ ಹಿನ್ನೆಲೆ ಲೂಸಿ ಅವರು ಎರಡನೇ ಮೇಲ್ಮನವಿಯನ್ನು ಮಾರ್ಚ್ನಲ್ಲಿ ಸಲ್ಲಿಸಿದ್ದರು. ಈ ಮೇನ್ಮನವಿ ಕೂಡಾ ತಿರಸ್ಕೃತಗೊಂಡಿದೆ.
2019ರಲ್ಲಿ ತಮ್ಮ ಕ್ರೈಸ್ತ ಸನ್ಯಾಸಿನಿಯೋರ್ವರನ್ನು ಅತ್ಯಾಚಾರಗೈದ ಆರೋಪಕ್ಕೆ ಸಂಬಂಧಿಸಿದಂತೆ ಬಿಷಪ್ ಪ್ರಾಂಕೋ ಮುಲಕ್ಕಲ್ ಅವರನ್ನು ಬಿಷಪ್ ಸ್ಥಾನದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿ ನಡೆಸಲಾಗಿದ್ದ ಪ್ರತಿಭಟನೆಯಲ್ಲಿ ಲೂಸಿ ಭಾಗವಹಿಸಿದ್ದರು. ಈ ಹಿನ್ನೆಲೆ ಲೂಸಿ ಅವರನ್ನು ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರೆಷನ್ (ಎಫ್ಸಿಸಿ) ಬಹಿಷ್ಕರಿಸಿತ್ತು.