ವಿಜಯನಗರ, ಜೂ.14 (DaijiworldNews/HR): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಯುವಕನೊಬ್ಬ ಬೇಗ ಮದುವೆ ಮಾಡಿಸಿ ಎಂದು ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಚಿರಂಜೀವಿ (23) ಎಂಬ ಗುರುತಿಸಲಾಗಿದೆ.
ಯುವಕ ಯಾರು ಇಲ್ಲದ ಸಮಯದಲ್ಲಿ ಸಿನಿಮಾ ಟಾಕೀಸ್ ರಸ್ತೆಯಲ್ಲಿರುವ ಟವರ್ ಏರಿ ಕುಳಿತಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸ್ಕಾಂ ಕಚೇರಿಗೆ ಕರೆ ಮಾಡಿ ಟವರ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಇನ್ನು ಚಿರಂಜೀವಿಗೆ ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಲಾಗಿದ್ದು, ಆಕೆಯೊಂದಿಗೆ ಬೇಗ ಮದುವೆ ಮಾಡಿಸುವಂತೆ ಯುವಕ ಬೇಡಿಕೆ ಇಟ್ಟಿದ್ದ, ಆದರೆ ಚಿರಂಜೀವಿಯ ಅಣ್ಣನಿಗೆ ಇನ್ನೂ ಮದುವೆಯಾಗದ ಕಾರಣ ಆತನ ಮದುವೆ ಮಾಡಿದ ಮೇಲೆ ನಿನಗೆ ಮದುವೆ ಮಾಡುತ್ತೇವೆ ಎಂದು ಪೋಷಕರು ಹೇಳಿದ್ದು, ಈ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪೊಲೀಸರು ನಾವು ಮುಂದೆ ನಿಂತು ಮದುವೆ ಮಾಡಿಸುತ್ತೇವೆ ಎಂದು ಮೈಕ್ ಮೂಲಕ ಘೋಷಣೆ ಮಾಡಿದ್ದು, ಟವರ್ ಮೇಲಿಂದ ಇಳಿದ ಮೇಲೆ ನನಗ್ಯಾರು ಹೊಡೆಯಬಾರದು ಎಂದು ಷರತ್ತು ಹಾಕಿದ ಚಿರಂಜೀವಿ ಕೊನೆಗೆ ಕೆಳಗಿಳಿದು ಬಂದಿದ್ದಾನೆ ಎನ್ನಲಾಗಿದೆ.
ಈ ಹಿಂದೆಯೂ ಈತ ನನಗೆ ಮದುವೆ ಮಾಡಿ ಎಂದು ಮನೆಯಲ್ಲಿ ಹಠ ಮಾಡಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.