ಡೆಹ್ರಾಡೂನ್ , ಜೂ 14 (DaijiworldNews/MS): ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟ ವೃದ್ದ ದಂಪತಿಗಳ ಆಸ್ತಿಯನ್ನು ಲಪಟಾಯಿಸಲು ಯತ್ನಿಸಿದ ಆರೋಪದಲ್ಲಿ ಭಾರತೀಯ ಜನತಾ ಪಕ್ಷ ನಾಯಕಿ ಹಾಗೂ ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಹಿಳಾ ಮೋರ್ಚಾದ (ಮಹಿಳಾ ವಿಭಾಗ) ಪ್ರಧಾನ ಕಾರ್ಯದರ್ಶಿ ರೀನಾ ಗೋಯಲ್, ಅವರ ಇಬ್ಬರು ಗಂಡು ಮಕ್ಕಳಾದ ಲಾವ್ಯ ಮತ್ತು ರಿಷಭ್ ಗೋಯಲ್ ಹಾಗೂ ಸಹಾಯಕ ಅನುಜ್ ಸೈನಿ ಅವರನ್ನು ಭಾನುವಾರ ಬಂಧಿಸಿದ್ದಾರೆ.
ಕ್ಲೆಮೆಂಟ್ ಟೌನ್ನ ಪ್ರದೇಶದ ಮನೆಯೊಂದರಲ್ಲಿ ವಾಸಿಸುತ್ತಿದ್ದ 80 ವರ್ಷದ ದಂಪತಿಗಳಾದ ಡಿಕೆ ಮಿತ್ತಲ್ ಪತ್ನಿ ಸುಶೀಲಾ ಮಿತ್ತಲ್ ವಾಸಿಸುತ್ತಿದ್ದು , ಸುಶೀಲಾ ಅವರು ಮೇ 2 ರಂದು ಹಾಗೂ ಡಿಕೆ ಮಿತ್ತಲ್ ಜೂನ್ 6 ರಂದು ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. ಇವರ ಏಕೈಕ ಪುತ್ರ ಎರಡು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದ. ದಂಪತಿಗಳು ಸಾವನ್ನಪ್ಪಿದ್ದ ಬಳಿಕ ಆಸ್ತಿ ವಶಕ್ಕೆ ಪಡೆಯಲು ಪೊಲೀಸರು ಸೀಲ್ ಮಾಡಿದ್ದ ವೃದ್ದ ದಂಪತಿಗಳ ಆಸ್ತಿಯನ್ನು ಬಿಜೆಪಿ ನಾಯಕಿ ಹಾಗೂ ಅವರ ಪುತ್ರರು ಒಡೆದುಹಾಕಿದ್ದರು.
ಈ ವಿಚಾರವಾಗಿ ಮೃತ ವೃದ್ದೆಯ ಸಹೋದರ ಅಮೇರಿಕಾದಿಂದ ಬಿಜೆಪಿ ಮುಖಂಡೆ ಡೆಹ್ರಾಡೂನ್ನಲ್ಲಿರುವ ತನ್ನ ಸಹೋದರಿಯ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಈ ಮೇಲ್ ಮೂಲಕ ದೂರು ರವಾನಿಸಿದ್ದರು. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿದೆ ಎಂದು ಡೆಹ್ರಾಡೂನ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಯೋಗೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.