ನವದೆಹಲಿ, ಜೂ.14 (DaijiworldNews/HR): ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ಇಬ್ಬರು ಆಪ್ತ ಸಹಾಯಕರನ್ನು ಪಶ್ಚಿಮಬಂಗಾಳ ಪೊಲೀಸರು ಬಂಧಿಸಿದ್ದು, ಎರಡು ದೇಶೀ ನಿರ್ಮಿತ ಬಂದೂಕು, ಸ್ಫೋಟಕ ಹಾಗೂ ಒಂದು ಸ್ವಯಂ ಚಾಲಿತ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಅಮೀರ್ ಅಲಿಯಾಸ್ ಅರ್ಮಾನ್ ಭೋಲಾ ಮತ್ತು ಅರುಣವ್ ಕುಯ್ಟಿ ಎಂದು ಗುರುತಿಸಲಾಗಿದೆ.
ಬಂಧಿತರಿಬ್ಬರ ಬಳಿ ಇದ್ದ ಏಳು ಸುತ್ತುಗಳ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಇತ್ತೀಚೆಗೆ ನಡೆದ ಪಶ್ಚಿಮಬಂಗಾಳ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.