ಬೆಂಗಳೂರು, ಜೂ.14 (DaijiworldNews/HR): ದೇಶಾದ್ಯಂತ ಕೊರೊನಾದೊಂದಿಗೆ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, ಅದರ ನಿರ್ವಹಣೆಗಾಗಿ ಇಂದು ದೇಶಾದ್ಯಂತ 1.06 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕರ್ನಾಟಕಕ್ಕೆ ಇಂದು 9,400 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.06 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದ್ದು, ಈ ವರೆಗೂ ರಾಜ್ಯಕ್ಕೆ 49,870 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದ" ಎಂದಿದ್ದಾರೆ.
ಇನ್ನು ರಾಜ್ಯಕ್ಕೆ ಹೆಚ್ಚುವರಿಯಾಗಿ 9,400 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಪೂರೈಕೆ ಮಾಡಲಾಗಿದ್ದು, ಆ ಮೂಲಕ ಇದಲ್ಲದೆ ಕರ್ನಾಟಕಕ್ಕೆ ಹೆಚ್ಚುವರಿ 4,680 ವೈಯಲ್ಸ್ ಆಂಫೊಟೆರಿಸಿನ್ ಬಿ ಲಸಿಕೆ ನೀಡಿಕೆಗೆ ಇಂದು ಕ್ರಮ ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.