ಆಗ್ರಾ, ಜೂ.14 (DaijiworldNews/HR): ಐದು ವರ್ಷದ ಮಗುವೊಂದು ಆಟವಾಡುತ್ತಿದ್ದ ವೇಳೆ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಆಗ್ರಾದ ಧರಿಯೈ ಗ್ರಾಮದಲ್ಲಿ ನಡೆದಿದ್ದು, ಮಗುವನ್ನು ಮೇಲೆತ್ತುವ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಸೋಮವಾರ ಬೆಳಿಗ್ಗೆ 8.30 ರ ಸುಮಾರಿಗೆ ಫತೇಹಾಬಾದ್ನ ನಿಬೋಹರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಳವೆ ಬಾವಿಯೊಳಗಿರುವ ಮಗುವಿನ ಚಲನೆಯನ್ನು ಇಲ್ಲಿಯವರೆಗೆ ಗುರುತಿಸಲು ಸಾಧ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಸೂರಜ್ ಪ್ರಸಾದ್ ತಿಳಿಸಿದ್ದಾರೆ.
ಇನ್ನು ತಂದೆ ಛೋಟೆಲಾಲ್ ಕೊರೆಸಿದ ಕೊಳವೆ ಬಾವಿಯಲ್ಲೇ ಮಗು ಬಿದ್ದಿದ್ದು, ನಾವು ಕೊಳವೆಬಾವಿಗೆ ಹಗ್ಗ ಬಿಟ್ಟಿದ್ದೆವು. ಆಗ ಮಗು ಅದನ್ನು ಹಿಡಿದುಕೊಂಡು, ನಮ್ಮ ಮಾತುಗಳಿಗೆ ಪ್ರತಿಕ್ರಿಯಿಸುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.