ನವದೆಹಲಿ, ಜೂ.14 (DaijiworldNews/HR): ಜೂನ್ 14ರಂದು ಮತ್ತೆ ಹೆಚ್ಚಳವಾದ ಪರಿಣಾಮ ಡೀಸೆಲ್ ಬೆಲೆಯೂ ಲೀಟರ್ಗೆ ನೂರು ರೂಪಾಯಿಗೆ ಸಮೀಪಿಸಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಬೆಲೆ 99.33 ರೂಪಾಯಿಗೆ ಏರಿಕೆಯಾಗಿದೆ.
ಭಾರತದಾದ್ಯಂತ ಪೆಟ್ರೋಲ್ ಬೆಲೆ ಲೀಟರ್ಗೆ ಸೋಮವಾರ 29-30 ಪೈಸೆಯಷ್ಟು ಹೆಚ್ಚಳವಾಗಿದ್ದು, ಡೀಸೆಲ್ ಬೆಲೆ ಲೀಟರ್ ಗೆ 28-30ಪೈಸೆ ಏರಿಕೆಯಾಗಿದೆ ಎಂದು ರಾಜ್ಯ ಸ್ವಾಮಿತ್ವದ ಇಂಧನ ಮಾರಾಟಗಾರರ ಕಂಪನಿಯ ಪ್ರಕಟಣೆ ತಿಳಿಸಿದೆ.
ಇನ್ನು ಬೆಂಗಳೂರಿನಲ್ಲಿ ಡೀಸೆಲ್ ಲೀಟರ್ ಗೆ 92.58 ರೂಪಾಯಿಗೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 96.04 ರೂಪಾಯಿ ಹಾಗೂ ಡೀಸೆಲ್ ಲೀಟರ್ ಬೆಲೆ 87.28 ರೂಪಾಯಿಗೆ ಏರಿಕೆಯಾಗಿದೆ.
ರಾಜಸ್ಥಾನದ ಶ್ರೀಗಂಗಾನಗರ್ನಲ್ಲಿ ಡೀಸೆಲ್ ಬೆಲೆ 100 ರೂಪಾಯಿಗಿಂತ ಅಧಿಕವಾಗಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್ನಲ್ಲಿ ಪೆಟ್ರೋಲ್ ಲೀಟರ್ ಬೆಲೆ ನೂರು ರೂಪಾಯಿ ಮೀರಿದೆ ಎಂದು ವರದಿಯಾಗಿದೆ.